ADVERTISEMENT

ನಕಲಿ ಎನ್‌ಒಸಿ: ₹ 24 ಲಕ್ಷ ವಂಚನೆ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:44 IST
Last Updated 1 ಮಾರ್ಚ್ 2020, 19:44 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರಾಕ್ಷೇಪಣಾ ಪತ್ರ (ಎನ್ಒಸಿ) ಕೊಡಿ ಸುವುದಾಗಿ ನಂಬಿಸಿ ₹ 27 ಲಕ್ಷ ವಂಚಿ ಸಿದ ಆರೋಪದಲ್ಲಿ ಮಹಿಳೆ ಸೇರಿ ನಾಲ್ವರ ವಿರುದ್ಧ ಸುದ್ದುಗುಂಟೆ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಡಿವಾಳ ನಿವಾಸಿ ರಾಮಸ್ವಾಮಿ ರೆಡ್ಡಿ ಎಂಬವರು ನೀಡಿದ ದೂರಿನ ಮೇಲೆ ವೀರೇಶ್‌, ಭರತ್‌, ಸೂರಿ ಅಲಿಯಾಸ್‌ ಬಿಡಿಎ ಸೂರಿ, ರೂಪಾ ಎಂಬವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಮಡಿವಾಳದಲ್ಲಿ ಮೂಲ ಮಾಲೀಕರಿಂದ ಖರೀದಿಸಿದ ನಿವೇ ಶನಕ್ಕೆ ಬಿಡಿಎದಿಂದ ಎನ್ಒಸಿ ಮಾಡಿ ಕೊಡುವುದಾಗಿ ಆರೋಪಿಗಳು ಹಣ ಪಡೆದುಕೊಂಡಿದ್ದರು. ಬಳಿಕ ಎನ್‌ಒಸಿ ಕೂಡಾ ಮಾಡಿಕೊಟ್ಟಿದ್ದರು. ಅದರ ಆಧಾರದಲ್ಲಿ ಖಾತೆ ಬದಲಾವಣೆಗೆ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದಾಗ ಆರೋಪಿಗಳು ನೀಡಿದ ಎನ್ಒಸಿ ನಕಲಿ ಎನ್ನುವುದು ಗೊತ್ತಾ ಗಿದೆ. ಹಣ ವಾಪಸು ನೀಡುವಂತೆ ಕೇಳಿದಾಗ ಜೀವಬೆದರಿಕೆ ಒಡ್ಡುತ್ತಿ ದ್ದಾರೆ’ ಎಂದು ದೂರಿನಲ್ಲಿ ರೆಡ್ಡಿ ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.