ಬೆಂಗಳೂರು: ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು, ದಟ್ಟಣೆ ಕಡಿಮೆಗೊಳಿಸಲು ಅ.1ರಿಂದ 15ರವರೆಗೆ ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.
ಮೈಸೂರು–ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್, ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್‌ಪ್ರೆಸ್, ಮೈಸೂರು ಬಾಗಲಕೋಟೆ–ಮೈಸೂರು ಬಸವ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಮೈಸೂರು– ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್, ಮೈಸೂರು-ಪಂಡರಪುರ–ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ 1 ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಜೋಡಿಸಲಾಗುತ್ತಿದೆ.
ಮೈಸೂರು-ತಾಳಗುಪ್ಪ– ಮೈಸೂರು ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಜೋಡಿಸಲಾಗುತ್ತಿದೆ.
ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್, ತಾಳಗುಪ್ಪ-ಮೈಸೂರು–ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್, ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್, ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್, ಅರಸೀಕೆರೆ-ಮೈಸೂರು–ಅರಸೀಕೆರೆ ಪ್ಯಾಸೆಂಜರ್, ಮೈಸೂರು-ಶಿವಮೊಗ್ಗ–ಮೈಸೂರು ಎಕ್ಸ್‌ಪ್ರೆಸ್, ಶಿವಮೊಗ್ಗ– ಚಿಕ್ಕಮಗಳೂರು–ಶಿವಮೊಗ್ಗ ಪ್ಯಾಸೆಂಜರ್, ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್, ಅರಸೀಕೆರೆ-ಮೈಸೂರು–ಅರಸೀಕೆರೆ ಪ್ಯಾಸೆಂಜರ್, ಮೈಸೂರು-ಎಸ್ಎಂವಿಟಿ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್, ಎಸ್ಎಂವಿಟಿ ಬೆಂಗಳೂರು-ಕರೈಕಲ್–ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳನ್ನು ಜೋಡಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.