ADVERTISEMENT

50 ಮಹಿಳೆಯರಿಗೆ ಇ-ಆಟೋ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:51 IST
Last Updated 11 ಜುಲೈ 2024, 16:51 IST
ಹರ್ಬಲ್​ಲೈಫ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು ಮಹಿಳೆಯರಿಗೆ ಇ- ಆಟೋ ವಿತರಿಸಿದರು. ಶಾಸಕಿ ಮಂಜುಳಾ ಲಿಂಬಾವಳಿ ಇದ್ದರು
ಹರ್ಬಲ್​ಲೈಫ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು ಮಹಿಳೆಯರಿಗೆ ಇ- ಆಟೋ ವಿತರಿಸಿದರು. ಶಾಸಕಿ ಮಂಜುಳಾ ಲಿಂಬಾವಳಿ ಇದ್ದರು   

ಕೆ.ಆರ್.ಪುರ: ‘ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಕೌಶಲ ಅಭಿವೃದ್ಧಿಗೆ ಪ್ರೇರೇಪಿಸುವ ಗುರಿಯನ್ನು ಇಕೋ-ವ್ಹೀಲ್ಸ್ ವುಮೆನ್ಸ್ ಯೋಜನೆ ಹೊಂದಿದೆ’ ಎಂದು ಹರ್ಬಲ್ ​ಲೈಫ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಹೇಳಿದರು.

ಕೆ.ಆರ್.ಪುರ ಸಮೀಪದ ಕಿತ್ತಗನೂರಿನಲ್ಲಿ ಹರ್ಬಲ್​ಲೈಫ್​, ಶಿಶು ಮಂದಿರದ ಸಹಭಾಗಿತ್ವದೊಂದಿಗೆ ‘ಇಕೋ-ವ್ಹೀಲ್ಸ್‌ ವುಮೆನ್ಸ್ ಇನಿಶಿಯೇಟಿವ್' ಯೋಜನೆಯ ಮೂಲಕ 50 ಫಲಾನುಭವಿಗಳಿಗೆ ಇ-ಆಟೋಗಳನ್ನು ವಿತರಿಸಿ ಮಾತನಾಡಿದರು.

ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರು, ವಿಧವೆಯರು, ಆರ್ಥಿಕವಾಗಿ ಹಿಂದುಳಿದವರು, ಒಂಟಿ ತಾಯಂದಿರು ಹಾಗೂ ಬಡತನ ರೇಖೆಗಿಂತ ಕೆಳಗಿರುವವರು ಇ-ಆಟೋ ಯೋಜನೆಯ ಫಲಾನುಭವಿಗಳು ಎಂದರು.

ADVERTISEMENT

ಶಾಸಕಿ ಮಂಜುಳಾ ಲಿಂಬಾವಳಿ, ಶಿಶು ಮಂದಿರದ ಸಂಸ್ಥಾಪಕ ಡಾ.ಹೆಲ್ಲಾ ಮುಂಡ್ರಾ, ಶಿಶು ಮಂದಿರದ ನಿರ್ದೇಶಕ ಆನಂದ್ ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.