ADVERTISEMENT

ಇ-ತ್ಯಾಜ್ಯ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:44 IST
Last Updated 15 ಜುಲೈ 2019, 19:44 IST
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಳವಡಿಸಿರುವ ಇ–ತ್ಯಾಜ್ಯ ಸಂಗ್ರಹಿಸುವ ಬಿನ್‌ಗೆ ನಿರುಪಯುಕ್ತ ಉಪಕರಣಗಳನ್ನು ಮೇಯರ್ ಗಂಗಾಂಬಿಕೆ, ಉಪಮೇಯರ್ ಬಿ.ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಹಾಕಿದರು  –ಪ್ರಜಾವಾಣಿ ಚಿತ್ರ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಳವಡಿಸಿರುವ ಇ–ತ್ಯಾಜ್ಯ ಸಂಗ್ರಹಿಸುವ ಬಿನ್‌ಗೆ ನಿರುಪಯುಕ್ತ ಉಪಕರಣಗಳನ್ನು ಮೇಯರ್ ಗಂಗಾಂಬಿಕೆ, ಉಪಮೇಯರ್ ಬಿ.ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಹಾಕಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇ–ತ್ಯಾಜ್ಯ (ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳು) ಸಂಗ್ರಹಿಸುವ ಅಭಿಯಾನಕ್ಕೆ ಬಿಬಿಎಂಪಿ ಸೋಮವಾರ ಚಾಲನೆ ನೀಡಿದೆ.

ನಗರದಲ್ಲಿ ಉತ್ಪತ್ತಿ ಆಗುವ ಇ-ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬಿಬಿಎಂಪಿ ಮತ್ತು ‘ಬಿ-ರೆಸ್ಪಾನ್ಸಿಬಲ್’ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಒಂದು ತಿಂಗಳ ಕಾಲ ಅಭಿಯಾನ ನಡೆಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

‘ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಟಿ.ವಿ, ವಾಷಿಂಗ್ ಮೆಷೀನ್, ಕಂಪ್ಯೂಟರ್, ಟೆಲಿಪೋನ್ ಹಾಗೂ ಇನ್ನಿತರ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಪಾಲಿಕೆಯ ಕೇಂದ್ರ ಕಚೇರಿ ಮತ್ತು ಎಲ್ಲಾ 8 ವಲಯಗಳ ಕಚೇರಿ ಆವರಣದಲ್ಲಿ ಇ-ತ್ಯಾಜ್ಯ ಬಿನ್‌ಗಳನ್ನು ಅಳವಡಿಸಲಾಗಿದೆ. ನಿರುಪಯುಕ್ತ ಉಪಕರಣಗಳನ್ನು ತಂದು ಅದರಲ್ಲಿ ಹಾಕಬಹುದು. ಬಳಿಕ ಹಂತ ಹಂತವಾಗಿ ಎಲ್ಲಾ 198 ವಾರ್ಡ್‌ಗಳಲ್ಲೂ ಈ ಬಿನ್‌ಗಳನ್ನು ಅಳವಡಿಸಲಾಗುವುದು. ಮನೆಗಳಲ್ಲಿ ದೊಡ್ಡ ಗಾತ್ರದ ನಿರುಪಯುಕ್ತ ಯಂತ್ರಗಳಿದ್ದರೆ ದೂ. ಸಂಖ್ಯೆ– 7349737586 ಸಂರ್ಪಕಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.