ಬೆಂಗಳೂರು: ಪರಿಸರಕ್ಕೆ ಧಕ್ಕೆ ಆಗದ ರೀತಿಯಲ್ಲಿ ಇ–ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಇ–ತ್ಯಾಜ್ಯ ವಿಲೇವಾರಿ ಕುರಿತು ನಗರದ ಜನರು ಹೆಚ್ಚು ಜಾಗೃತರಾಗಿದ್ದಾರೆ ಎಂದು ಸೆರೆಬ್ರ ಗ್ರೀನ್ ಇ–ವೇಸ್ಟ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಹೈದರಾಬಾದ್ ಕೂಡ ಮೊದಲ ಸ್ಥಾನದಲ್ಲಿದೆ. ದೆಹಲಿ ಎರಡನೇ ಸ್ಥಾನದಲ್ಲಿದೆ.
ಭಾರತದ ಶೇ 8ರಿಂದ 10ರಷ್ಟು ಜನ ಮಾತ್ರ ಇ–ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಾರೆ. ವಿಲೇವಾರಿ ಬಗ್ಗೆ ಮಾಹಿತಿ ಇಲ್ಲದ ಶೇ 50 ರಷ್ಟು ಜನ ಬಳಕೆಯಾಗದ ಡಿವೈಸ್‌ಗಳನ್ನು 5 ವರ್ಷಗಳವರೆಗೆ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ ಎಂದು ಈ ಸಮೀಕ್ಷೆ ಹೇಳುತ್ತದೆ. ಇದರಲ್ಲಿ ದೆಹಲಿ ಮುಂಚೂಣಿಯಲ್ಲಿದ್ದರೆ, ಮುಂಬೈ ಹಾಗೂ ಪುಣೆ ನಂತರದ ಸ್ಥಾನಗಳಲ್ಲಿವೆ.
ಸಮರ್ಪಕ ವಿಲೇವಾರಿಯ ಪರ್ಯಾಯ ಮಾರ್ಗಗಳು ಭಾರತದಲ್ಲಿ ಇಲ್ಲ. ಶೇ 80ರಷ್ಟು ಜನರಿಗೆ ಇ–ತ್ಯಾಜ್ಯ ವಿಲೇವಾರಿ ಮಾಡುವುದು ಗೊತ್ತಿಲ್ಲ ಎಂದು ಸಂಸ್ಥೆ ಹೇಳುತ್ತದೆ. ಇದಕ್ಕಾಗಿ ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಪುಣೆ ನಗರದ 600ಕ್ಕೂ ಹೆಚ್ಚು ಜನರನ್ನು ಸಂದರ್ಶನ ಮಾಡಲಾಗಿದೆ. ಇ–ತ್ಯಾಜ್ಯ ವಿಲೇವಾರಿ ಕುರಿತು ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಶೇ 72 ರಷ್ಟು ಜನರು ತಮ್ಮ ಪ್ರದೇಶಗಳಲ್ಲಿ ಇ–ತ್ಯಾಜ್ಯವನ್ನು ಸಂಗ್ರಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಶೇ 18 ರಷ್ಟು ಜನರು ತಮ್ಮ ಮನೆ ಬಳಿ ಇರುವ ಅಂಗಡಿಗಳಿಗೆ ತ್ಯಾಜ್ಯವನ್ನು ವಿಲೇವಾರಿ ಮಾಡಿರುವುದಾಗಿ ಹೇಳಿದ್ದಾರೆ. ಶೇ 47ರಷ್ಟು ಜನರು ತ್ಯಾಜ್ಯವನ್ನು ಆನ್‌ಲೈನ್ ವಿನಿಮಯ ಮೂಲಕ ಹೊಸ ಉತ್ಪನ್ನ ಖರೀದಿ ಮಾಡಿದ್ದಾರೆ.
ಶೇ 83ರಷ್ಟು ಜನರು ಅವಕಾಶ ಇದ್ದರೆ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ತ್ಯಾಜ್ಯವನ್ನು ವಿಲೇಮಾರಿ ಮಾಡಬಯಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.