ಬೆಂಗಳೂರು: ‘ಬಡತನದ ಬಗ್ಗೆ ತಿಳಿಸುವ ಮಕ್ಕಳ ಪುಸ್ತಕಗಳ ಸಂಖ್ಯೆ ತೀರಾ ಕಡಿಮೆ. ಬಡವರಿಗೆ ಬಡತನದ ಅರ್ಥಶಾಸ್ತ್ರ ಅರಿವಾಗಬೇಕು’ ಎಂದು ಅರ್ಥಶಾಸ್ತ್ರಜ್ಞೆ ಎಸ್ತರ್ ಡಫ್ಲೋ ತಿಳಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಪ್ರಥಮ್ ಬುಕ್ಸ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ‘ಮೂಲಭೂತ ವಿಚಾರಗಳ ಬಗ್ಗೆ’ ಬರೆದ ಮಕ್ಕಳ ಪುಸ್ತಕಗಳ ಸರಣಿ ಬಿಡುಗಡೆಯಾಯಿತು. ಅವರ ಫ್ರೆಂಚ್ ಮೂಲದ ಕತೆಗಳನ್ನು ಕನ್ನಡ, ಮರಾಠಿ, ಹಿಂದಿ, ತಮಿಳು ಹಾಗೂ ಬಂಗಾಳಿ ಭಾಷೆಯಲ್ಲಿ ಪ್ರಕಟಿಸಲಾಗಿದೆ.
ಈ ವೇಳೆ ಮಾತನಾಡಿದ ಎಸ್ತರ್, ‘ಬಡವರು ಬಡವರಾಗಿಯೇ ಉಳಿಯುವುದು ಯಾಕೆ ? ಈ ಸಂಕೀರ್ಣ ವಿಷಯವನ್ನು ನಾನು ಬಿಡಿಬಿಡಿಯಾಗಿ ಕತೆ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಬಡತನದ ಕತೆಗಳು ಸಾಧ್ಯವಾದಷ್ಟು ಮಕ್ಕಳಿಗೆ ತಲುಪಬೇಕು. ಈ ಬಗ್ಗೆ ಅವರು ಆಲೋಚಿಸುವಂತಾಗಬೇಕು. ಈ ಬಗ್ಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಂತಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.