ADVERTISEMENT

ಬೆಂಗಳೂರು ವಕೀಲರ ಸಂಘಕ್ಕೆ ಡಿ.19ರಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:32 IST
Last Updated 26 ನವೆಂಬರ್ 2021, 16:32 IST

ಬೆಂಗಳೂರು: ‘ಬೆಂಗಳೂರು ವಕೀಲರ ಸಂಘ‘ಕ್ಕೆ ಡಿಸೆಂಬರ್ 19ರಂದು ಚುನಾವಣೆ ನಡೆಯಲಿದೆ. ಈ ಕುರಿತಂತೆ ಮುಖ್ಯ ಚುನಾವಣಾಧಿಕಾರಿ ಕೆ.ಎನ್‌.ಫಣೀಂದ್ರ ಅವರು ಶುಕ್ರವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ.

26ರ ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಡಿ.3ರಂದು ಅಂತಿಮ ದಿನವಾಗಿದ್ದು, ಅಂದೇ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸು ಪಡೆಯಲುಡಿ.6 ಕಡೇ ದಿನ. ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ19ರಂದು ಮತದಾನ ನಡೆಯಲಿದ್ದು ಅಂದೇ ಮಧ್ಯಾಹ್ನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾಧಿಕಾರಿಗಳಾಗಿ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಎನ್‌.ಎಸ್‌.ಸತ್ಯನಾರಾಯಣ, ಕೆ.ಎನ್‌.‍ಪುಟ್ಟೇಗೌಡ, ಟಿ.ಎನ್‌.ಶಿವಾರೆಡ್ಡಿ, ಎಂ.ಆರ್‌. ವೇಣುಗೋಪಾಲ, ಜಿ.ಚಂದ್ರಶೇಖರಯ್ಯ, ಎ.ಜಿ.ಶಿವಣ್ಣ, ಎಸ್‌.ಎನ್‌.ಪ್ರಶಾಂತಚಂದ್ರ ಹಾಗೂ ಪಿ.ಅನುಚೆಂಗಪ್ಪ ಕಾರ್ಯ ನಿರ್ವಹಿಸಲಿದ್ದಾರೆ.

ADVERTISEMENT

‘ಹೈಕೋರ್ಟ್, ಸಿಟಿ ಸಿವಿಲ್‌ ಕೋರ್ಟ್‌, ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಟ್ರೇಟ್‌ ಕೋರ್ಟ್ ಹಾಗೂ ಮೆಯೊಹಾಲ್ ಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸುವ 16 ಸಾವಿರಕ್ಕೂ ಹೆಚ್ಚು ನೋಂದಾಯಿತ ಮತದಾರರು ಮತದಾನ ಮಾಡಲಿದ್ದಾರೆ’ ಎಂದು ಹೈಕೋರ್ಟ್‌ ವಕೀಲ ಬಿ.ಬಾಲಕೃಷ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.