ADVERTISEMENT

ಬೆಸ್ಕಾಂ ಬಿಲ್‌ನಲ್ಲಿ ಆಸ್ತಿಗಳ ಗುರುತಿನ ಸಂಖ್ಯೆ ನಮೂದು: ತುಷಾರ್‌ ಗಿರಿನಾಥ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 19:48 IST
Last Updated 20 ಸೆಪ್ಟೆಂಬರ್ 2024, 19:48 IST
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿ ಯಲ್ಲಿರುವ ಆಸ್ತಿಗಳ ಗುರುತಿನ ಸಂಖ್ಯೆಯನ್ನು (ಪಿಐಡಿ) ಬೆಸ್ಕಾಂನ ವಿದ್ಯುತ್‌ ಬಿಲ್‌ನಲ್ಲಿ ನಮೂದಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಜಿಪಿಎಸ್‌ ಮಾಹಿತಿಯನ್ನು ಪ್ರತಿಯೊಂದು ಆಸ್ತಿಗೂ ಸೆರೆಹಿಡಿಯುವ ಅಭಿಯಾನವನ್ನು ಆರಂಭಿ ಸಲಾಗಿದ್ದು, ಇ–ಖಾತಾ ನೀಡಲು ಇದು ಕಡ್ಡಾಯವಾಗಿದೆ. ಇದಕ್ಕಾಗಿ ಬಿಬಿಎಂಪಿ ಆಸ್ತಿಗಳಿಗೆ ಭೇಟಿ ನೀಡಲಿದ್ದು, ಮಾಲೀಕರು ಅವರಿಗೆ ಸಹಕಾರ ನೀಡಬೇಕುಎಂದು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

ಮೊಬೈಲ್ ಅಪ್ಲಿಕೇಶನ್ ಮೂಲಕ ವಾರ್ಡ್‌ಗಳಲ್ಲಿರುವ ಎಲ್ಲ ಸ್ವತ್ತುಗಳನ್ನುಈಗಾಗಲೇ ಪಟ್ಟಿ ಮಾಡಲಾಗಿದೆ. ಅದೇ ಅ‌ಪ್ಲಿಕೇಷನ್‌ನಲ್ಲಿ ಪ್ರತಿಯೊಂದು ಆಸ್ತಿಯ ಜಿಪಿಎಸ್‌ ಮಾಹಿತಿಯನ್ನು ಬಿಬಿಎಂಪಿ ಸಿಬ್ಬಂದಿ ದಾಖಲಿಸುತ್ತಾರೆ ಎಂದರು.

ADVERTISEMENT

ಇ–ಖಾತಾ ಪ್ರತಿಯೊಂದು ಆಸ್ತಿಗೆ ಭೂ–ಆಧಾರ್‌ನಂತಿದ್ದು, ಅಧಿಕೃತ ದಾಖಲೆಯಾಗಲಿದೆ. ಇದರ ಮುಂದುವರಿದ ಭಾಗವಾಗಿ ಬೆಸ್ಕಾಂ ಬಿಲ್‌ಗಳಲ್ಲೂ ಆಸ್ತಿಗಳ ಪಿಐಡಿ ನಮೂದಿಸುವುದರಿಂದ ಸ್ವತ್ತಿನ ಸ್ಪಷ್ಟತೆಲಭ್ಯವಾಗುತ್ತದೆ. ಈ ಬಗ್ಗೆ ಬೆಸ್ಕಾಂನೊಂದಿಗೆ ಮಾತುಕತೆ ನಡೆಸಲಾಗಿದ್ದು,ಅವರು ಒಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ನಾಗರಿಕರೇ ತಮ್ಮ ಸ್ವತ್ತುಗಳ ಜಿಪಿಎಸ್‌ ಸೆರೆಹಿಡಿದು, ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುವ ‘ಸಿಟಿಜನ್‌ ಮಾಡ್ಯೂಲ್‌’ ಅನ್ನೂ ಮುಂದಿನ ದಿನಗಳಲ್ಲಿ ಆರಂಭಿ ಸಲಾಗುತ್ತದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಉಪ ಮುಖ್ಯಮಂತ್ರಿಯವರ ಸೂಚನೆಯಂತೆ ರಸ್ತೆ ಗುಂಡಿಗಳನ್ನು ಬಹುತೇಕ ಮುಚ್ಚಲಾಗಿದೆ. ಹೊಸದಾಗಿ ದಾಖಲಾಗುತ್ತಿರುವ ಗುಂಡಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಹಲವು ಕಡೆ ರಸ್ತೆ ಮೇಲ್ಮೈ ಹಾಳಾಗಿರುವುದರಿಂದ ಅದಕ್ಕೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.