ADVERTISEMENT

ಪರಿಸರಪ್ರೀತಿ ವಿ.ವಿಯ ರೀತಿ...

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 4:41 IST
Last Updated 6 ಜುಲೈ 2024, 4:41 IST
<div class="paragraphs"><p>ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಪ್ರಕೃತಿ ಬಿಡಿಸಿದ ಚಿತ್ತಾರಗಳು</p></div>

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಪ್ರಕೃತಿ ಬಿಡಿಸಿದ ಚಿತ್ತಾರಗಳು

   

ಐತಿಹಾಸಿಕ ಪಾಮುಖ್ಯತೆ ಪಡೆದಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರದೇಶ ವಿಶಿಷ್ಟ ಗಿಡಮರಗಳ ಆಗರವಾಗಿದೆ. ಅದರ ಜತೆಗೆ ಹೊಸದಾಗಿ ಗಿಡ ಮರಗಳನ್ನು ನೆಟ್ಟು ಮತ್ತು ಸವಿಸ್ತಾರವಾದ ಪರಿಚಯ ಫಲಕಗಳನ್ನು ಹಾಕಿ ಪಾಕೃತಿಕ ಗತ ವೈಭವನ್ನು ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯ ಮುಂದಾಗಿದೆ.

ಹೊಸ ಹೊಸ ಬೆಂಚ್‌ಗಳನ್ನು ಕೂಡ ಹಾಕಿ ಲಾನ್ ಅಭಿವೃದ್ಧಿ ಮಾಡಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ದೇಶ–ವಿದೇಶಗಳಿಂದ ಮರಗಳನ್ನು ತರಿಸಿ ಅದನ್ನು ನೆಟ್ಟು ಹಳೆಯ ಮರ ಗಿಡಗಳನ್ನು ಪುನರ್‌ಜೀವನಗೊಳಿಸುವ ಕೆಲಸ ಭರದಿಂದ ಸಾಗಿದೆ. ಎಸ್.ಟಿ.ಪಿ ಪ್ಲಾಂಟ್‌ಗಳನ್ನು ಕೂಡ ಹೊಸದಾಗಿ ಅಳವಡಿಸಲಾಗುತ್ತಿದೆ. 30 ಮಳೆನೀರು ಸಂಗ್ರಹದ ಪಿಟ್ಸ್ ಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತಿದ್ದು ನಗರದ ಅಂತರ್ಜಲ ವೃದ್ಧಿಗೆ ಕೂಡ ಕೊಡುಗೆ ನೀಡಲು ವಿಶ್ವವಿದ್ಯಾಲಯ ಪಣತೊಟ್ಟಿದೆ.

ADVERTISEMENT

ಗಿಡ ಮರಗಳ ಸಮೀಕ್ಷೆ ನಡೆಸಿ, 100 ವರ್ಷಗಳಷ್ಟು ಹಳೆಯ ಪಾಲ್ಮ್ ಮರಗಳು, 150 ವರ್ಷದ ಆಲದ ಮರ ವಿವಿ ಆವರಣದಲ್ಲಿ ಇದ್ದು ಅದನ್ನು ಮತ್ತಷ್ಟು ವರ್ಷಗಳ ಕಾಲ ಬಾಳುವಂತೆ ಮಾಡುವ ಕೆಲಸವನ್ನು ಹಲವು ಸಂಘ ಸಂಸ್ಥೆಗಳ ಸಹಾಯದಿಂದ ಮಾಡಲಾಗುತ್ತಿದೆ. ಹೊಸ ಪರಿಸರ ಮತ್ತು ಹವಾಮಾನ ಬದಲಾವಣೆ ವಿಭಾಗದಿಂದ ಸಾಕಷ್ಟು ಮರ ಗಿಡಗಳ ಹೆಸರನ್ನಿಡುವ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ಒಟ್ಟಾರೆ ಹಸಿರೀಕರಣ ಮತ್ತು ಮಳೆ ನೀರಿನ ಸಂಗ್ರಹಕ್ಕೆ ಒತ್ತು ನೀಡಲಾಗುತ್ತಿದೆ.

ನಗರ ವಿಶ್ವವಿದ್ಯಾಲಯ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಬೇರ್ಪಟ್ಟ ಸಮಯದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಮತ್ತು ರಸ್ತೆಯ ವ್ಯವಸ್ಥೆ ಇರಲಿಲ್ಲ. ಎಸ್.ಟಿ.ಪಿ ಪ್ಲಾಂಟ್ ಗಳು ಇರಲಿಲ್ಲ. ಆದರೆ ಈಗ ಎಲ್ಲ ರೀತಿಯ ನೀರು ಮರುಬಳಕೆಯ ವ್ಯವಸ್ಥೆ ಮಾಡಲಾಗಿದೆ. ಸೌರಶಕ್ತಿ ವ್ಯವಸ್ಥೆಯನ್ನು ಸಹ ತರಲಾಗಿದೆ. ಕೆಲವು ಪರಿಣತರ ಸಹಾಯದಿಂದ ಕೇವಲ 6 ತಿಂಗಳಿನಲ್ಲಿ ಹಸಿರೀಕರಣ ಮಾಡಲಾಗಿದೆ. ಬರದ ಸಮಯವಿದ್ದಾಗೂ ಗಿಡ ಮರಗಳಿಗೆ ನೀರುಣಿಸುವ ವ್ಯವಸ್ಥೆಯನ್ನು ಸ್ಪ್ರಿಂಕ್ಲರ್ ಸಿಸ್ಟಮ್ ತರಲಾಗಿದೆ ಎಂದು ಪ್ರೊಫೆಸರ್ ಲಿಂಗರಾಜ್ ಗಾಂಧಿ ಹೇಳಿದ್ದಾರೆ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.