ADVERTISEMENT

ಬಾಪೂಜಿ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:54 IST
Last Updated 2 ಅಕ್ಟೋಬರ್ 2024, 16:54 IST
ಪ್ರೌಢಶಾಲೆ ವಿಭಾಗ: ಸಮರ್ಥ ನಾಗರಾಜ ಅರ್ಕಸಾಲಿ, ದಿವ್ಯಾ ಶ್ರೀಶೈಲ ಗಾಣಿಗೇರ, ಚೈತನ್ಯ ಕೆ.ಎಂ. 
ಪ್ರೌಢಶಾಲೆ ವಿಭಾಗ: ಸಮರ್ಥ ನಾಗರಾಜ ಅರ್ಕಸಾಲಿ, ದಿವ್ಯಾ ಶ್ರೀಶೈಲ ಗಾಣಿಗೇರ, ಚೈತನ್ಯ ಕೆ.ಎಂ.    

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮಾನ ವಿತರಿಸಿದರು.

ಪ್ರಥಮ ಬಹುಮಾನ ₹31 ಸಾವಿರ, ದ್ವಿತೀಯ ಬಹುಮಾನ ₹21 ಸಾವಿರ ಹಾಗೂ ತೃತೀಯ ಬಹುಮಾನ ₹ 11 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ. ರಾಜ್ಯದಾದ್ಯಂತ ಒಟ್ಟು 1,54,294 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪದವಿ/ಸ್ನಾತಕೋತ್ತರ ವಿಭಾಗ: ಶರಣಪ್ಪ ಪ್ರವೀಣ್ ನಿಂಗಪ್ಪ ಕಿತ್ನೂರ ನಸೀಮಾ ಇ.ಚಪ್ಪರಬಂದ್

ಪ್ರೌಢಶಾಲೆ ವಿಭಾಗ: ದಿವ್ಯಾ ಶ್ರೀಶೈಲ ಗಾಣಿಗೇರ,ಸರ್ಕಾರಿ ಪ್ರೌಢಶಾಲೆ, ಕೆಎಸ್‌ಆರ್‌ಪಿ,ಮಚ್ಚೆ,ಬೆಳಗಾವಿ(ಪ್ರಥಮ), ಸಮರ್ಥ ನಾಗರಾಜ ಅರ್ಕಸಾಲಿ ,ಸರ್ಕಾರಿ ಪ್ರೌಢಶಾಲೆ, ಹುನಗುಂದ, ತಾಲ್ಲೂಕು, ಮುಂಡಗೋಡ, ಉತ್ತರ ಕನ್ನಡ ಜಿಲ್ಲೆ(ದ್ವಿತೀಯ), ಚೈತನ್ಯ ಕೆ.ಎಂ.ಸಂತ ಅನ್ನಮ್ಮ ಪ್ರೌಢಶಾಲೆ, ವಿರಾಜಪೇಟೆ, ಕೊಡಗು ಜಿಲ್ಲೆ(ತೃತೀಯ)

ಪದವಿಪೂರ್ವ ಕಾಲೇಜು ವಿಭಾಗ: ವಿಜಯಕುಮಾರ್ ಬ.ದೊಡ್ಡಮನಿ, ಸರ್ಕಾರಿ ಪ.ಪೂ.ಕಾಲೇಜು, ಮುಳಗುಂದ, ಗದಗ ಜಿಲ್ಲೆ (ಪ್ರಥಮ), ಪರೀಕ್ಷಾನಂದ್, ಮರಿಮಲ್ಲಪ್ಪ ಪ.ಪೂ.ಕಾಲೇಜು,ಮೈಸೂರು (ದ್ವಿತೀಯ), ಗೋರಮ್ಮ, ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು, ಕೋಲಾರ (ತೃತೀಯ)

ಪದವಿ/ಸ್ನಾತಕೋತ್ತರ ವಿಭಾಗ: ಪ್ರವೀಣ್ ನಿಂಗಪ್ಪ ಕಿತ್ನೂರ,ಕನ್ನಡ ವಿ.ವಿ.ಹಂಪಿ,ವಿಜಯನಗರ ಜಿಲ್ಲೆ (ಪ್ರಥಮ), ಶರಣಪ್ಪ, ತುಮಕೂರು ವಿ.ವಿ.ತುಮಕೂರು (ದ್ವಿತೀಯ), ನಸೀಮಾ ಇ.ಚಪ್ಪರಬಂದ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯಪುರ (ತೃತೀಯ)

ADVERTISEMENT
ಪದವಿಪೂರ್ವ ಕಾಲೇಜು ವಿಭಾಗ: ಪರೀಕ್ಷಾನಂದ್ ವಿಜಯಕುಮಾರ್ ಬ.ದೊಡ್ಡಮನಿ ಗೋರಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.