ADVERTISEMENT

ಹೈಡ್ರೋಜನ್ ಇಂಧನ ಉತ್ಪಾದನೆಗೆ ಸಿದ್ಧತೆ: ಬೊಮ್ಮಾಯಿ

‘ಎಲೆಕ್ಟ್ರಿಕಲ್‌ ವೆಹಿಕಲ್‌’ ಅಭಿಯಾನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 20:05 IST
Last Updated 1 ಜುಲೈ 2022, 20:05 IST
ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾದ ‘ಇವಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಎಲೆಕ್ಟ್ರಿಕಲ್‌ ಬೈಸಿಕಲ್‌   – ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್‌
ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾದ ‘ಇವಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಎಲೆಕ್ಟ್ರಿಕಲ್‌ ಬೈಸಿಕಲ್‌   – ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್‌   

ಬೆಂಗಳೂರು: ’ರಾಜ್ಯದಲ್ಲಿ ಹೈಡ್ರೋಜನ್ ಇಂಧನ ಉತ್ಪಾದಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಇ.ವಿ (ಎಲೆಕ್ಟ್ರಿಕ್ ವೆಹಿಕಲ್) ಅಭಿಯಾನ ಹಾಗೂ 152 ಚಾರ್ಜಿಂಗ್ ಸ್ಟೇಷನ್‌
ಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಹೈಡ್ರೋಜನ್ ಇಂಧನ ತಯಾರಿ
ಸಲು ಈಗಾಗಲೇ ಎರಡು ಕಂಪನಿ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳ ಲಾಗಿದೆ. ಶೀಘ್ರ ಮೂರು ಘಟಕ ಗಳು ಕರ್ನಾ ಟಕದಲ್ಲಿ ಆರಂಭ ವಾಗಲಿವೆ. ಹೈಡ್ರೋಜನ್ ಇಂಧನ ನವೀಕರಿ ಸಬಹುದಾದ ಇಂಧನಗಳಲ್ಲೇ ಅತ್ಯು ತ್ತಮ ವಾಗಿದೆ. ಇದರಿಂದ, ಇಂಧನ ಉಳಿತಾಯವಾಗಲಿದೆ. ಕೇಂದ್ರ ಸರ್ಕಾ ರದ ನೆರವಿನಿಂದ ಈ ಯೋಜನೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಮುದ್ರದ ನೀರಿನಿಂದ ಅಮೋ ನಿಯಾ ತಯಾರಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸ
ಲಾಗಿದೆ. ಡಿಎಪಿ ಗೊಬ್ಬರ ತಯಾರಿಸಲು ಅಮೋನಿಯಾವನ್ನು ಅತಿ ಹೆಚ್ಚು ಬಳಸಲಾಗುತ್ತಿದೆ. ಅಮೋನಿಯಾ ಉತ್ಪಾದಿಸಲು ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಭಾರತ ಮತ್ತು ಕೊಲ್ಲಿ ದೇಶಗಳು ಹೊರತುಪಡಿಸಿದರೆ ಬೇರೆಲ್ಲಿಯೂ ಈ ರೀತಿ ತಂತ್ರಜ್ಞಾನ ಇಲ್ಲ’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

‘ಎಲೆಕ್ಟ್ರಿಕ್‌ ವಾಹನ ಖರೀದಿ ದರ ಜನಸಾಮಾನ್ಯರಿಗೆ ನಿಲುಕುವಂತಿರ ಬೇಕು. ಉತ್ಪಾದಕರು ಈ ನಿಟ್ಟಿನಲ್ಲಿ ಚಿಂತಿ ಸಬೇಕು. ಎಲೆಕ್ಟ್ರಿಕಲ್‌ ವಾಹನಗಳಿಗಾಗಿ ಹೆಚ್ಚಿನ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಬ್ಯಾಟರಿಗಳನ್ನು ಬದಲಾಯಿಸುವ ವ್ಯವಸ್ಥೆಯ ಕೇಂದ್ರ ಸ್ಥಾಪಿಸಲು ಮಹತ್ವ ನೀಡುವುದು ಅಗತ್ಯವಿದೆ’ ಎಂದರು.

‘ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕಲ್‌ ವಾಹನ ಬಳಕೆ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಮಲ್ಟಿ ಎಕ್ಸಲ್‌ ಎಲೆಕ್ಟ್ರಿಕಲ್‌ ಟ್ರಕ್‌ ಸಹ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಆಗ ಸಾರಿಗೆ ಕ್ಷೇತ್ರದಲ್ಲಿ ಬದಲಾವಣೆಗಳಾಗಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.