ADVERTISEMENT

ಬೆಂಗಳೂರು: ಮೊದಲ ’ಜೌಲ್‌’ ಕೇಂದ್ರ ಕಾರ್ಯಾರಂಭ

ನಗರದಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳ ಹೊಸ ಜಾಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:23 IST
Last Updated 16 ಸೆಪ್ಟೆಂಬರ್ 2024, 16:23 IST
ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ (ಎಡಗಡೆಯವರು) 'ಜೌಲ್' ಯೋಜನೆ ಅನಾವರಣ ಮಾಡಿದರು. ಅಮೆಜಾನ್‌ ಇಂಡಿಯಾದ ಉಪಾಧ್ಯಕ್ಷ (ನಿರ್ವಹಣೆ) ಅಭಿನವ್ ಸಿಂಗ್, ಕಜಮ್ ಕಂಪನಿ ಸಿಇಒ ಅಕ್ಷಯ್‌ ಶೇಖರ್‌ ಮತ್ತು ದಿ ಕ್ಲೈಮೆಟ್ ಪ್ಲೆಡ್‌ಜ್‌ ಎ‍ಪಿಎಸಿ ಲೀಡ್‌ನ ಮಥಿಸಿ ಕುಟ್ಟಿ ಪಾಲ್ಗೊಂಡಿದ್ದರು
-ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ (ಎಡಗಡೆಯವರು) 'ಜೌಲ್' ಯೋಜನೆ ಅನಾವರಣ ಮಾಡಿದರು. ಅಮೆಜಾನ್‌ ಇಂಡಿಯಾದ ಉಪಾಧ್ಯಕ್ಷ (ನಿರ್ವಹಣೆ) ಅಭಿನವ್ ಸಿಂಗ್, ಕಜಮ್ ಕಂಪನಿ ಸಿಇಒ ಅಕ್ಷಯ್‌ ಶೇಖರ್‌ ಮತ್ತು ದಿ ಕ್ಲೈಮೆಟ್ ಪ್ಲೆಡ್‌ಜ್‌ ಎ‍ಪಿಎಸಿ ಲೀಡ್‌ನ ಮಥಿಸಿ ಕುಟ್ಟಿ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ    

ಬೆಂಗಳೂರು: ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸುವ ದಿ ಕ್ಲೈಮೆಟ್‌ ಪ್ಲೆಡ್ಜ್‌ ಬೆಂಬಲದ ‘ಜೌಲ್‌’ ಯೋಜನೆಯಡಿ ನಗರದ ದೊಡ್ಡಕಲ್ಲಸಂದ್ರದಲ್ಲಿ ಸ್ಥಾಪಿಸಿರುವ ಮೊದಲ ಇವಿ ಚಾರ್ಜಿಂಗ್ ಕೇಂದ್ರ ಸೋಮವಾರದಿಂದ ಕಾರ್ಯಾರಂಭ ಮಾಡಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಜೌಲ್‌‘ (ಜಾಯಿಂಟ್‌ ಆಪರೇಷನ್‌ ಯೂನಿಫೈಯಿಂಗ್ ಲಾಸ್ಟ್‌ಮೈಲ್‌ ಎಲೆಕ್ಟ್ರಿಫಿಕೇಷನ್‌) –ವಿದ್ಯುತ್ ಚಾಲಿತ ವಾಹನಗಳ ಹೊಸ ಜಾರ್ಜಿಂಗ್‌ ಜಾಲವನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ನೂತನ ಚಾರ್ಜಿಂಗ್ ಕೇಂದ್ರದ ಆರಂಭವನ್ನು ಆಯೋಜಕರು ಪ್ರಕಟಿಸಿದರು. ಈ ಯೋಜನೆಯಡಿ ವರ್ಷಾಂತ್ಯದಲ್ಲಿ ಇನ್ನೂ ಇಂಥ ಐದು ಚಾರ್ಜಿಂಗ್ ಕೇಂದ್ರಗಳನ್ನು ನಗರದಲ್ಲಿ ಆರಂಭಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ, ದಿ ಕ್ಲೈಮೆಟ್‌ ಪ್ಲೆಡ್ಜ್‌ನ ನಾಯಕ ಸ್ಯಾಲಿ ಪೌಟ್ಸ್‌, ‘2030ರ ವೇಳೆಗೆ ಬೆಂಗಳೂರಿನಲ್ಲಿರುವ ತ್ರಿಚಕ್ರ ವಾಹನ, ಕ್ಯಾಬ್‌ಗಳನ್ನು ಶೇ 100ರಷ್ಟು ಎಲೆಕ್ಟ್ರಿಕ್‌ವಾಹಗಳಾಗಿ ಪರಿವರ್ತಿಸುವ ಸರ್ಕಾರದ ಗುರಿಯನ್ನೂ ‘ಜೌಲ್‌’ ಮೂಲಕ ಬೆಂಬಲಿಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮಾತನಾಡಿ, ‘ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ದಿಸೆಯಲ್ಲಿ ರಾಷ್ಟ್ರೀಯ ಗುರಿ ಸಾಧಿಸುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಈ ಯೋಜನೆ ನೆರವಾಗಲಿದೆ. ದಿ ಕ್ಲೈಮೆಟ್‌ ಪ್ಲೆಡ್ಜ್ ನೇತೃತ್ವದ ಈ ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದು ತಿಳಿಸಿದರು.

ಕ್ಲೈಮೆಟ್‌ ಪ್ಲೆಡ್ಜ್‌ಗೆ ಸಹಿಹಾಕಿರುವ ಅಮೆಜಾನ್, ಮಹೀಂದ್ರಾ ಲಾಜಿಸ್ಟಿಕ್ಸ್, ಉಬರ್, ಎಚ್‌ಸಿಎಲ್‌, ಮೆಜೆಂಟಾ ಮೊಬಿಲಿಟಿ ಕಂಪನಿಗಳು, ಇವಿ ಚಾರ್ಜಿಂಗ್ ಕೇಂದ್ರಗಳ ಬಳಕೆ ಹೆಚ್ಚಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿವೆ. ‘ಇವಿ’ ಉದ್ಯಮದ ಪಾಲುದಾರ ಕಂಪನಿ ಕಜಮ್,  ನವೀಕರಿಸಬಹುದಾದ ಇಂಧನ ಪೂರೈಕೆ ಕಂಪನಿಯಾಗಿರುವ ಗ್ರಿಂಕೊ ಮತ್ತು ಕಾರ್ಯತಂತ್ರದ ಸಲಹಾ ಪಾಲುದಾರ ಕಂಪನಿ ಡೆಲಾಯ್ಟ್ ಕೂಡ ಈ ಯೋಜನೆಗೆ ಬೆಂಬಲ ನೀಡಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.