ADVERTISEMENT

ದೃಷ್ಟಿ ಇಲ್ಲದಿದ್ದರೂ ಹೃದಯದಿಂದ ನೋಡುವರು: ನಟ ಶ್ರೀನಾಥ್‌

ವಿಶ್ವ ಬ್ರೈಲ್‌ ದಿನಾಚರಣೆಯಲ್ಲಿ ನಟ ಶ್ರೀನಾಥ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 14:44 IST
Last Updated 4 ಜನವರಿ 2024, 14:44 IST
<div class="paragraphs"><p>ನಗರದಲ್ಲಿ ಗುರುವಾರ ನಡೆದ ವಿಶ್ವ ಬ್ರೈಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಂಜಾಬ್‌ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಜಯ್ ಅರೋರಾ </p><p> –ಪ್ರಜಾವಾಣಿ ಚಿತ್ರ</p></div>

ನಗರದಲ್ಲಿ ಗುರುವಾರ ನಡೆದ ವಿಶ್ವ ಬ್ರೈಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಂಜಾಬ್‌ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಜಯ್ ಅರೋರಾ

–ಪ್ರಜಾವಾಣಿ ಚಿತ್ರ

   

ಬೆಂಗಳೂರು: ‘ದೃಷ್ಟಿಯಿಲ್ಲದೇ ಇದ್ದರೂ ಹೃದಯದಿಂದ ನೋಡುವ ಹೃದಯವಂತರು ನೀವು’ ಎಂದು ನಟ ಶ್ರೀನಾಥ್‌ ಹೇಳಿದರು.

ADVERTISEMENT

ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಬ್ರೈಲ್‌ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಣ್ಣಿದ್ದವರೇ ತಮ್ಮ ಸಣ್ಣತನದಿಂದ ಕುರುಡರಾಗಿದ್ದಾರೆ. ಕಣ್ಣು ಕಾಣದೇ ಇದ್ದರೂ ಒಳ್ಳೆಯದೆರೆಡೆಗೆ ಜೀವನ ದೃಷ್ಟಿ ಇರುವ ನೀವು ಕಣ್ಣಿದ್ದವರಿಗಿಂತ ಮಿಗಿಲು ಎಂದು ಬಣ್ಣಿಸಿದರು.

ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆಯ ಚನ್ನವೀರ ಅವರು ಬ್ರೈಲ್‌ ಲಿಪಿಯ ಬಗ್ಗೆ ಮಾತನಾಡಿ, ‘ಫ್ರಾನ್ಸ್‌ ದೇಶ ಲೂಯಿಸ್‌ ಬ್ರೈಲ್ ಅವರು 3ನೇ ವರ್ಷದಲ್ಲಿ ಸಂಭವಿಸಿದ ಅಪಘಾತದಲ್ಲಿ ಕಣ್ಣು ಕಳೆದುಕೊಂಡರು. ಭಾರತದಲ್ಲಿ ಆಗಿದ್ದರೆ ಅವರು ಮನೆಯಲ್ಲೇ ಉಳಿಯಬೇಕಿತ್ತು. ಆದರೆ, ಅವರ ತಂದೆ ಹಾಗೆ ಮಗನನ್ನು ಶಾಲೆಗೆ ಕಳುಹಿಸಿದರು. ಅಕ್ಷರಗಳು ಅರ್ಥವಾಗುವಂತೆ ಮಾಡಲು ದಪ್ಪವಾಗಿ ಬರೆದುಕೊಡುತ್ತಿದ್ದರು. ಮುಂದೆ ಲೂಯಿಸ್‌ ಬ್ರೈಲ್ ದೊಡ್ಡವರಾದ ಮೇಲೆ ಕತ್ತಲು ಬರಹದಲ್ಲಿ ನಿಪುಣರಾದರು. ಕಣ್ಣಿಲ್ಲದ ಎಲ್ಲರಿಗೂ ಉಪಯೋಗವಾಗುಂತೆ ಲಿಪಿ ಪತ್ತೆ ಹಚ್ಚಿದರು’ ಎಂದು ವಿವರಿಸಿದರು.

’ಲೂಯಿಸ್‌ ಅವರು ಲಿಪಿ ಪತ್ತೆ ಹಚ್ಚಿದರೂ, ಅದನ್ನು ಬಳಕೆ ಮಾಡಲು ಅಂಧರು ತಯಾರಿದ್ದರೂ ಅವರಿದ್ದ ಶಾಲೆಯ ಆಡಳಿತ ಮಂಡಳಿ ಒಪ್ಪಲಿಲ್ಲ. ಈ ಲಿಪಿಯ ಮಹತ್ವ ಅರಿವಾದುದೇ ಲೂಯಿಸ್‌ ಅವರು ನಿಧನರಾದ ಬಳಿಕ. ಲೂಯಿಸ್‌ ಬ್ರೈಲ್‌ ಅವರ ನೆನಪಿಗಾಗಿ ಈ ಲಿಪಿಗೆ ಬ್ರೈಲ್‌ ಲಿಪಿ ಎಂದು ಹೆಸರಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅಂಧರಾಗಿದ್ದೂ ಐಎಎಸ್‌ ಮಾಡಿರುವ ಅಜಯ್‌ ಅರೋರ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಾಧಕರಿಗೆ ಸನ್ಮಾನ, ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಅಂಗವಿಕಲರ ಕಲ್ಯಾಣ ಇಲಾಖೆಯ ಆಯುಕ್ತ ದಾಸ್‌ ಸೂರ್ಯವಂಶಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಸಿದ್ದೇಶ್ವರ್‌, ಓಂ ಸೇವಾ ಕೇಂದ್ರದ ಸಂಸ್ಥಾಪಕ ಸಿ.ಎನ್‌. ಕೃಷ್ಣ, ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ಸಂಯೋಜಕ ಎಸ್‌.ಕೆ. ಅನಂತ, ‘ಅಟೊಮನ್‌ ಲೀವ್ಸ್‌’ ಪ್ರಿ ಸ್ಕೂಲ್‌ ಬ್ರ್ಯಾಂಡ್‌ ಸಹಸಂಸ್ಥಾಪಕ ಶರತ್‌ ಕದ್ರಿ, ಪತ್ರಕರ್ತ ಹರಿಪ್ರಸಾದ್‌, ಎಲ್‌ ಆ್ಯಂಡ್‌ ಟಿ ಹಿರಿಯ ಉಪಾಧ್ಯಕ್ಷ ನಿತಿನ್‌ ಮೆಹ್ತಾ, ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಅಧ್ಯಕ್ಷ ನಾಗರಾಜ್‌ ಎಂ., ಪ್ರಧಾನ ಕಾರ್ಯದರ್ಶಿ ಗೌತಮ್‌ ಪ್ರಕಾಶ್‌ ಅಗರ್‌ವಾಲ್, ವ್ಯವಸ್ಥಾಪಕ ಟ್ರಸ್ಟಿ ಶೈನಿ ಪೌಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.