ADVERTISEMENT

ಹಿಂದೂ: ಜಾತಿ ವ್ಯವಸ್ಥೆಯ ಸಂಕೇತವಲ್ಲ –ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 21:08 IST
Last Updated 6 ಜುಲೈ 2024, 21:08 IST
<div class="paragraphs"><p>ಕಾರ್ಯಕ್ರಮದಲ್ಲಿ ಎಸ್. ಗುರುಮೂರ್ತಿ (ಎಡದಿಂದ ನಾಲ್ಕನೆಯವರು) ಅವರ ‘ಕರ್ಪೂರಿ ಠಾಕೂರ್’ ಪುಸ್ತಕವನ್ನು ಎಂ. ವೀರಪ್ಪ ಮೊಯಿಲಿ ಬಿಡುಗಡೆ ಮಾಡಿದರು. ವಕೀಲ ಸಿ.ಎಸ್. ದ್ವಾರಕಾನಾಥ್, ಅಕ್ಲಾಕ್ ಅಹ್ಮದ್, ಬಿ.ಆರ್.ಪಾಟೀಲ, ಕವಿ ಎಲ್. ಹನುಮಂತಯ್ಯ ಪಾಲ್ಗೊಂಡಿದ್ದರು </p></div>

ಕಾರ್ಯಕ್ರಮದಲ್ಲಿ ಎಸ್. ಗುರುಮೂರ್ತಿ (ಎಡದಿಂದ ನಾಲ್ಕನೆಯವರು) ಅವರ ‘ಕರ್ಪೂರಿ ಠಾಕೂರ್’ ಪುಸ್ತಕವನ್ನು ಎಂ. ವೀರಪ್ಪ ಮೊಯಿಲಿ ಬಿಡುಗಡೆ ಮಾಡಿದರು. ವಕೀಲ ಸಿ.ಎಸ್. ದ್ವಾರಕಾನಾಥ್, ಅಕ್ಲಾಕ್ ಅಹ್ಮದ್, ಬಿ.ಆರ್.ಪಾಟೀಲ, ಕವಿ ಎಲ್. ಹನುಮಂತಯ್ಯ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಎಲ್ಲಿಯವರೆಗೆ ಹಿಂದೂ ಸಮಾಜವನ್ನು ಜಾತಿ ವ್ಯವಸ್ಥೆ ಆವರಿಸಿಕೊಂಡಿರುತ್ತದೋ, ಆ ಬಂಧನದಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ನನ್ನನ್ನು ನಾನು ಹಿಂದೂ ಎಂದು ಕರೆದುಕೊಳ್ಳುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ತಿಳಿಸಿದರು. 

ADVERTISEMENT

ಭವತಾರಿಣಿ ಪ್ರಕಾಶನ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಸ್. ಗುರುಮೂರ್ತಿ ಅವರು ರಚಿಸಿದ ‘ಕರ್ಪೂರಿ ಠಾಕೂರ್’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದ ಅವರು, ‘ಹಿಂದೂ ಎನ್ನುವುದು ಜಾತಿ ವ್ಯವಸ್ಥೆಯ ಸಂಕೇತವಲ್ಲ’ ಎಂದು ಪ್ರತಿಪಾದಿಸಿದರು.

‘ಸಮಾಜದಲ್ಲಿ ಜಾತಿ ವ್ಯವಸ್ಥೆ, ಲಿಂಗ ತಾರತಮ್ಯತೆ ನಿವಾರಣೆ ಆಗುವವರೆಗೆ ಬಡತನ ತೊಲಗುವುದಿಲ್ಲ. ವಿವಿಧ ಸರ್ಕಾರಿ ಕಾರ್ಯಕ್ರಮಗಳಿಂದ ಈ ವ್ಯವಸ್ಥೆಯ ಸುಧಾರಣೆ ಸಾಧ್ಯವಿಲ್ಲ. ಇದಕ್ಕೆ ವೈಚಾರಿಕ ಶಸ್ತ್ರಚಿಕಿತ್ಸೆ ಅಗತ್ಯ. ಜಗತ್ತಿನ ಸಂತೋಷ ಸೂಚ್ಯಂಕದಲ್ಲಿ ನಮ್ಮ ದೇಶ 126ನೇ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿನ ಜಾತಿ ವ್ಯವಸ್ಥೆಯೇ ಕಾರಣ. ಶೈಕ್ಷಣಿಕ ಹಾಗೂ ವೈಜ್ಞಾನಿಕ ಪ್ರಗತಿ ಹೊಂದಿದಂತೆ ಜಾತಿ ವ್ಯವಸ್ಥೆ ಬೆಳೆಯುತ್ತಿದೆ. ಆದ್ದರಿಂದ ಜಾತಿ ವ್ಯವಸ್ಥೆಯ ವಿರುದ್ಧ ಆಂದೋಲನ ನಡೆಯಬೇಕು’ ಎಂದರು.

‘ರಾಜಕಾರಣಿಗಳಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದಾರೆ. ಅವರಿಗೆ ಶಿಕ್ಷಣದ ಅಗತ್ಯ ಇದೆ‘ ಎಂದರು. ನಾನು ‘ವಿಶ್ವ ಸಂಸ್ಕೃತಿಯ ಮಹಾಯಾನ’ ಎಂಬ ಪುಸ್ತಕವನ್ನು ಬರೆಯುತ್ತಿದ್ದೇನೆ. ಒಟ್ಟು ಐದು ಸಂಪುಟಗಳಲ್ಲಿ ಹೊರಬರಲಿದೆ’ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ ಅವರು,, ‘ಎಲ್ಲರೂ ಸಮಾಜವಾದಿ ಟೋಪಿ ಹಾಕಿಕೊಳ್ಳುತ್ತಿದ್ದಾರೆ. ಆದರೆ, ಯಾರು ಅಸಲಿ ಸಮಾಜವಾದಿ ಎನ್ನುವುದು ತಿಳಿಯದಂತಾಗಿದೆ. ಸರಳ ಸಜ್ಜನಿಕೆಯ ಜನರು ಇತಿಹಾಸದಲ್ಲಿ ಉಳಿಯುತ್ತಿಲ್ಲ’ ಎಂದು ವಿಷಾದಿಸಿದರು.

‘ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಸಿದ್ಧಾಂತಗಳನ್ನು ಹುಟ್ಟು ಹಾಕಿದವರು ಸಮಾಜವಾದಿಗಳು. ಆದರೆ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತಿ ವ್ಯವಸ್ಥೆಯು ತೊಲಗಿಲ್ಲ. ಜಾತಿಯನ್ನು ಬೇರೆ ರೂಪದಲ್ಲಿ ತಂದು ಆಡಳಿತ ನಡೆಸುವ ಹುನ್ನಾರಗಳು ನಡೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಅಕ್ಲಾಕ್ ಅಹ್ಮದ್ ಅವರು, ಠಾಕೂರ್ ಅವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.  ಸಮಾಜವಾದಿ ಲೇಖಕ ಮಂಗ್ಳೂರು ವಿಜಯ ಅವರು ಪುಸ್ತಕದ ಬಗ್ಗೆ ಮಾತನಾಡಿದರು.  

Highlights - ಸರ್ಕಾರಿ ಕಾರ್ಯಕ್ರಮಗಳಿಂದ ವ್ಯವಸ್ಥೆಯ ಸುಧಾರಣೆ ಅಸಾಧ್ಯ ರಾಜಕಾರಣಿಗಳಲ್ಲಿ ಬಹುತೇಕರು ಅನಕ್ಷರಸ್ಥರು, ಶಿಕ್ಷಣದ ಅಗತ್ಯವಿದೆ ಎಲ್ಲ ಸಮಾಜವಾದಿ ಟೋಪಿ ಧರಿಸುತ್ತಿದ್ದಾರೆ. ಅಸಲಿ ಯಾರೆಂದು ತಿಳಿಯುತ್ತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.