ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಎಕ್ಸೆಲ್ ಅಕಾಡೆಮಿಯಿಂದ ಅಲ್ಪಾವಧಿ ಕೋರ್ಸ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:49 IST
Last Updated 22 ಜನವರಿ 2020, 21:49 IST

ಬೆಂಗಳೂರು: ಸಿ.ಇ.ಟಿ., ಕಾಮೆಡ್–ಕೆ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ನಗರದ ಎಕ್ಸೆಲ್‌ ಅಕಾಡೆಮಿಕ್ಸ್‌ ಸಂಸ್ಥೆಯು ಅಲ್ಪಾವಧಿ ಕೋರ್ಸ್‌ಗಳ ದಾಖಲಾತಿ ಪ್ರಾರಂಭಿಸಿದೆ.

ದ್ವಿತೀಯ ಪಿಯುಸಿ ಓದುತ್ತಿರುವ ಹಾಗೂ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ತರಬೇತಿಗೆ ದಾಖಲಾಗಬಹುದಾಗಿದೆ. ಸುಮಾರು 30 ದಿನಗಳ ತರಬೇತಿಯಲ್ಲಿ ವಿವಿಧ ವಿಷಯಗಳನ್ನು ಬೋಧಿಸುವ ಜತೆಗೆ ಕಾರ್ಯಾಗಾರ ಹಾಗೂ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಅವಧಿಯಲ್ಲಿ ಪರೀಕ್ಷೆಗಳಿಗೆ ಓದುವ ಹಾಗೂ ಬರೆಯುವ ವಿಧಾನದ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ.‌ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆಯು ಇರಲಿದೆ. ಊಟ–ತಿಂಡಿಯನ್ನು ಒದಗಿಸಲಾಗುತ್ತದೆ.

ಇಲ್ಲಿನ ಉಪನ್ಯಾಸಕರ ಜತೆಗೆ ಹೈದರಾಬಾದ್, ಕೋಲ್ಕತ್ತ ಸೇರಿದಂತೆ ದೇಶದ ವಿವಿಧ ನಗರಗಳ ಉಪನ್ಯಾಸಕರು ವಿಷಯಗಳನ್ನು ಬೋಧಿಸುತ್ತಾರೆ. ನೀಟ್ ಪರೀಕ್ಷೆಗೆ 40 ದಿನಗಳ ತರಬೇತಿ ನೀಡಲಾಗುತ್ತದೆ. ಜೆ.ಇ.ಇ ಹಾಗೂ ಸಿ.ಇ.ಟಿ ತರಬೇತಿ ತಲಾ 30 ದಿನಗಳು ಇರಲಿವೆ. ಮಾ.20ರಿಂದ ತರಗತಿಗಳು ಪ್ರಾರಂಭವಾಗಲಿವೆ. ಆಸಕ್ತರು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ವಿಳಾಸ:ಎಕ್ಸೆಲ್ ಅಕಾಡೆಮಿ ಸಂಸ್ಥೆ, ಯಲಹಂಕ ಉಪನಗರ, ಶೇಷಾದ್ರಿಪುರ ಕಾಲೇಜು ಹತ್ತಿರ, ಬೆಂಗಳೂರು–64

ಸಂಪರ್ಕ:7676917777, 9036357499

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.