ಬೆಂಗಳೂರು ಮೂಲದ, ಸದ್ಯ ಲಂಡನ್ ವಾಸಿಯಾಗಿರುವ ನಿಖಿಲ್ ಇನಾಯ ಅವರ ವರ್ಣಚಿತ್ರಗಳು ನಗರದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇನಾಯ ಅವರ ಕುಂಚದಲ್ಲಿ ಸಂಸ್ಕೃತಿ, ಸಂಪ್ರದಾಯದ ಪ್ರತೀಕವಾದ ಚಿತ್ರಗಳು ಅರಳಿವೆ. ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಅಜ್ಜಿ ಜೊತೆಯಲ್ಲಿ ವಾಸವಿದ್ದಾಗ ರಚಿಸಿದ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ತನ್ನ ಅಜ್ಜಿ ಶಾಂತನಾಯಕಿ ಬಾಲಸುಬ್ರಮಣ್ಯಂ ಅವರ ನೆನಪಿಗಾಗಿ ಈ ಪ್ರದರ್ಶನ ಆಯೋಜನೆಗೊಂಡಿದೆ. ಈ ಹಿಂದೆ ಅವರು ತಮ್ಮ ವರ್ಣಚಿತ್ರಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು, ಆರ್ಟ್ ಹೌಸ್ ಇಂಡಿಯಾ ಮತ್ತು ಹಾಂಗ್ ಕಾಂಗ್ ವಿಷುಯಲ್ ಆರ್ಟ್ಸ್ ಸೆಂಟರ್‌ನಲ್ಲಿ ಪ್ರದರ್ಶಿಸಿದ್ದಾರೆ.
ದಿನಾಂಕ: ಅಕ್ಟೋಬರ್ 25 ರಿಂದ 29ರರವರೆಗೆ
ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ
ಸ್ಥಳ: ಹೌಸ್ ಆರ್ಟ್ ಗ್ಯಾಲರಿ, ಅರಮನೆ ರಸ್ತೆ, ವಸಂತನಗರ (ಮೌಂಟ್ ಕಾರ್ಮೆಲ್ ಕಾಲೇಜು ಬಳಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.