ಬೆಂಗಳೂರು: 3ರಿಂದ 30 ವರ್ಷದವರೆಗಿನ ವಿಭಿನ್ನ ಸಾಮರ್ಥ್ಯದ (ಆಟಿಸಂ) ಕಲಾವಿದರು ಬಿಡಿಸಿದ ಕಲಾಕೃತಿಗಳ ಪ್ರದರ್ಶನವನ್ನು ನವೆಂಬರ್ 17ರಿಂದ ನ.19ರವರೆಗೆ ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ‘ಕ್ಯಾಡ್ರೆ’ ಆಟಿಸಂ ಕೇಂದ್ರ ಹಮ್ಮಿಕೊಂಡಿದೆ.
ಆಟಿಸಂ ಬಗ್ಗೆ ಅರಿವು ಮೂಡಿಸಲು, ಆಟಿಸಂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನ.17ರಂದು ಸಂಜೆ 5.45ರಿಂದ ರಾತ್ರಿ 8ರವರೆಗೆ ಹಾಗೂ ನ.18 ಮತ್ತು 19ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಕಲಾ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.