ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಡುವೆ ಗುರುವಾರ ಸಾರ್ವಜನಿಕ ಸಂಚಾರ ಆರಂಭಗೊಂಡಿದೆ. ಮೊದಲ ದಿನ ಬೆಳಿಗ್ಗೆ 5ರಿಂದ ಸಂಜೆ 7ರವರೆಗೆ ಒಟ್ಟು 11,093 ಪ್ರಯಾಣಿಕರು ಸಂಚರಿಸಿದ್ದಾರೆ.
ಹೊಸ ನಿಲ್ದಾಣಗಳಾದ ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರಗಳಲ್ಲಿ 6,032 ಪ್ರಯಾಣಿಕರು ಮೆಟ್ರೊ ರೈಲು ಪ್ರವೇಶಿಸಿದ್ದಾರೆ. ಅದೇ ರೀತಿ ಬೇರೆ ಕಡೆಗಳಿಂದ ಬಂದು ಈ ನಿಲ್ದಾಣಗಳಲ್ಲಿ 5,061 ಪ್ರಯಾಣಿಕರು ಇಳಿದಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
‘ಮಾದಾವರ ವಿಸ್ತರಿತ ಮಾರ್ಗದ ಆರಂಭದಿಂದಾಗಿ ಸಮಯ ಉಳಿತಾಯವಾಗಿದೆ. ಬೆಳಿಗ್ಗಿನ ಪಾಳಿ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸುಲಭವಾಗಿದೆ. ಮನೆ ಕೆಲಸದ ಬೆಳಿಗ್ಗಿನ ಒತ್ತಡವನ್ನು ಇದು ಕಡಿಮೆ ಮಾಡಿದೆ’ ಪಿಎಂಎಸ್‌ಎಸ್‌ವೈ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಸರಿತಾ ಬಿ.ಆರ್. ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.