ADVERTISEMENT

ಕೆಂಗೇರಿ– ಚಲ್ಲಘಟ್ಟ: ಮೆಟ್ರೊ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 16:12 IST
Last Updated 29 ಜುಲೈ 2023, 16:12 IST
ಕೆಂಗೇರಿ–ಚಲ್ಲಘಟ್ಟ ನಡುವೆ ಶನಿವಾರ ಮೆಟ್ರೊ ರೈಲು ಪ್ರಾಯೋಗಿಕ ಸಂಚಾರ ನಡೆಸಲಾಯಿತು
ಕೆಂಗೇರಿ–ಚಲ್ಲಘಟ್ಟ ನಡುವೆ ಶನಿವಾರ ಮೆಟ್ರೊ ರೈಲು ಪ್ರಾಯೋಗಿಕ ಸಂಚಾರ ನಡೆಸಲಾಯಿತು   

ಬೆಂಗಳೂರು: ಮೂರು ದಿನಗಳ ಹಿಂದೆ ಕೆ.ಆರ್‌.ಪುರ–ಬೈಯಪ್ಪನಹಳ್ಳಿ ನಡುವೆ ಮೆಟ್ರೊ ಪ್ರಾಯೋಗಿಕ ಸಂಚಾರ ಆರಂಭಿಸಿದ್ದ ಬಿಎಂಆರ್‌ಸಿಎಲ್‌ ಇದೀಗ ಶನಿವಾರ ಕೆಂಗೇರಿ–ಚಲ್ಲಘಟ್ಟ ನಡುವೆ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದೆ.

ಬೆಳಿಗ್ಗೆ 11.27ರಿಂದ ಸಂಜೆ 4.15ರ ವರೆಗೆ ಹಲವು ಬಾರಿ ಮೆಟ್ರೊ ರೈಲು ಸಂಚರಿಸಿತು. ಮೆಟ್ರೊ ರೈಲಿನಲ್ಲಿ ಬಿಎಂಆರ್‌ಸಿಎಲ್‌ ತಾಂತ್ರಿಕ ತಂಡವು ಸಂಚರಿಸಿ ಪರಿಶೀಲಿಸಿತು.

ನೇರಳೆ ಮಾರ್ಗದಲ್ಲಿನ ವಿಸ್ತರಿತ ಕಾಮಗಾರಿ ಇದಾಗಿದ್ದು, ಬೈಯಪ್ಪನಹಳ್ಳಿ–ಕೆ.ಆರ್‌. ಪುರ ನಡುವೆ 2.5 ಕಿಲೋಮೀಟರ್‌ ಹಾಗೂ ಕೆಂಗೇರಿ–ಚಲ್ಲಘಟ್ಟದ ನಡುವೆ 1.9 ಕಿ.ಮೀ ಕಾಮಗಾರಿ ಬಾಕಿ ಉಳಿದಿತ್ತು. ಎರಡೂ ಕಡೆಗಳಲ್ಲಿ ಕಾಮಗಾರಿ ಮುಗಿದಿದೆ. ಕೆಲವು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿ, ಎಲ್ಲ ತಾಂತ್ರಿಕ ತೊಂದರೆಗಳು ಬಗೆಹರಿದ ಬಳಿಕ ಆಗಸ್ಟ್‌ ಅಂತ್ಯದ ಒಳಗೆ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.