ADVERTISEMENT

ಮಕ್ಕಳ ಸಾಹಿತ್ಯ ಲೋಕದಲ್ಲಿ ಪ್ರಯೋಗ ಅಗತ್ಯ: ನಾಗೇಶ ಹೆಗಡೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 0:30 IST
Last Updated 28 ಜನವರಿ 2024, 0:30 IST
<div class="paragraphs"><p>ನಾಗೇಶ ಹೆಗಡೆ</p></div>

ನಾಗೇಶ ಹೆಗಡೆ

   

ಬೆಂಗಳೂರು: ಮಕ್ಕಳ ಸಾಹಿತ್ಯ ಲೋಕದಲ್ಲಿ ಪ್ರಯೋಗಗಳಾಗಬೇಕು. ಸಮಕಾಲೀನ ಸಂಗತಿಗಳನ್ನು ಅದರ ಚೌಕಟ್ಟಿನೊಳಗೆ ತರಬೇಕು. ಮಕ್ಕಳ ಸಾಹಿತ್ಯಕ್ಕೆ ಹೊಸ ಸ್ಪರ್ಶದ ಅಗತ್ಯವಿದೆ ಎಂದು ಲೇಖಕ ನಾಗೇಶ ಹೆಗಡೆ ಪ್ರತಿಪಾದಿಸಿದರು.

ಪರಾಗ್ ಹಾಗೂ ಬಹುರೂಪಿ ಪ್ರಕಾಶನ ಜಂಟಿಯಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಕ್ಕಳ ಕೃತಿಗಳ ಭಾಷಾಂತರ ಕಾರ್ಯಾಗಾರದಲ್ಲಿ ಸಾಹಿತಿಯೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.

ADVERTISEMENT

ವಿಜ್ಞಾನ ಸಂವಹನ ಹೇಗೆ ಸರಳ ಭಾಷೆಯನ್ನು ಹೊಂದಿ, ಜನರಿಗೆ ಅರ್ಥವಾಗಬೇಕು ಎಂದು ಬಯಸುತ್ತೇವೆಯೋ ಮಕ್ಕಳ ಸಾಹಿತ್ಯ ರಚಿಸುವಾಗಲೂ ಅದೇ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಾಗ್‌ನ ಲಕ್ಷ್ಮಿ ಕರುಣಾಕರನ್, ಬಹುರೂಪಿಯ ಜಿ.ಎನ್. ಮೋಹನ್, ಶ್ರೀಜಾ ವಿ.ಎನ್., ಮಕ್ಕಳ ಸಾಹಿತ್ಯ ತಜ್ಞರಾದ ಎಂ. ಅಬ್ದುಲ್ ರೆಹಮಾನ್ ಪಾಷ, ತೇಜಸ್ವಿ ಶಿವಾನಂದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.