ADVERTISEMENT

ಡೆಲಿವರಿ ಹುಡುಗರ ಬೆದರಿಸಿ ಹಣ ಸುಲಿಗೆ: ನಾಲ್ವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:58 IST
Last Updated 2 ಸೆಪ್ಟೆಂಬರ್ 2024, 15:58 IST
ಐಸಾಕ್‌
ಐಸಾಕ್‌   

ಬೆಂಗಳೂರು: ಮಾರಕಾಸ್ತ್ರ ಹಿಡಿದು ಡೆಲಿವರಿ ಹುಡುಗರನ್ನು ಬೆದರಿಸಿ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಜೀವನ್‌ ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಎಲ್‌ನ ವಿಭೂತಿಪುರದ ಭರತ್‌(19), ಅನ್ನಸಂದ್ರಪಾಳ್ಯದ ಜೋಯಲ್‌ ಅಭಿಷೇಕ್‌(19), ಹೆಣ್ಣೂರು  ಮುಖ್ಯ ರಸ್ತೆಯ ನಿವಾಸಿ ಐಸಾಕ್‌(22) ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ನಾಲ್ಕು ಬೈಕ್‌ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ.

ADVERTISEMENT

ಮಾರತ್‌ಹಳ್ಳಿ, ಕೆ.ಆರ್‌.ಪುರ, ಬೈಯಪನಹಳ್ಳಿ ಹಾಗೂ ಜೆ.ಬಿ.ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದವು‌ ಎಂದು ಪೊಲೀಸರು ಹೇಳಿದರು.‌

ವಿವಿಧ ಕಂಪನಿಗಳ ಡೆಲಿವರಿ ಹುಡುಗರನ್ನೇ ಗುರಿಯಾಗಿಸಿ ಆರೋಪಿಗಳು ಚಾಕು ಹಿಡಿದು ಅಡ್ಡಗಟ್ಟುತ್ತಿದ್ದರು. ಬಳಿಕ ಬೆದರಿಸಿ ಅವರ ಬಳಿಯಿರುವ ಊಟ, ತಿಂಡಿ, ಮೊಬೈಲ್‌ ಹಾಗೂ ದ್ವಿಚಕ್ರ ವಾಹನವನ್ನು ದೋಚಿಕೊಂಡು ಪರಾರಿ ಆಗುತ್ತಿದ್ದರು. ಆಗಸ್ಟ್ 4 ಮತ್ತು 21ರಂದು ಎಚ್ಎಎಲ್‍ನ ಕೋನೇನ ಅಗ್ರಹಾರದಲ್ಲಿ ಮಾರಕಾಸ್ತ್ರ ಹಿಡಿದು ಡೆಲಿವರಿ ಹುಡುಗರನ್ನು ದೋಚಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಸುಲಿಗೆಗೆ ಒಳಗಾದ ಉತ್ತರ ಭಾರತ ಮೂಲದ ಡೆಲಿವರಿ ಹುಡುಗರನ್ನು ಪತ್ತೆಹಚ್ಚಿ ದೂರು ಪಡೆದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ರಾತ್ರಿ ವೇಳೆ ಸುಲಿಗೆ ನಡೆಸುತ್ತಿದ್ದರು. ಸುಲಿಗೆಯ ಹಣದಲ್ಲಿ ಪಾರ್ಟಿ ನಡೆಸುತ್ತಿದ್ದರು. ಪಾರ್ಟಿಯ ಉದ್ದೇಶಕ್ಕೆ ಈ ರೀತಿಯ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಜೋಯಲ್‌ 
ಭರತ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.