ADVERTISEMENT

ವಿದ್ಯುತ್‌ ಪೂರೈಕೆಯಲ್ಲಿ ದೋಷ: ಹಸಿರು ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2024, 13:02 IST
Last Updated 30 ಜುಲೈ 2024, 13:02 IST
<div class="paragraphs"><p>ಮೆಟ್ರೊ ರೈಲು</p></div>

ಮೆಟ್ರೊ ರೈಲು

   

ಬೆಂಗಳೂರು: ನಗರದ ಹಸಿರು ಮಾರ್ಗದ ಮೆಟ್ರೊ ರೈಲಿನ ಸಂಚಾರದಲ್ಲಿ ವ್ಯತ್ಯಯವಾಗಿದೆ. ತಾಂತ್ರಿಕ ದೋಷದಿಂದಾಗಿ ನಾಗಸಂದ್ರ ಮತ್ತು ರಾಷ್ಟ್ರೀಯ ವಿದ್ಯಾಲಯ ರಸ್ತೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ರೈಲಗಳು ಸಂಚರಿಸುತ್ತಿವೆ. ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ನಮ್ಮ ಮೆಟ್ರೊ ಹೇಳಿದೆ. 

ಈ ಕುರಿತು ನಮ್ಮ ಮೆಟ್ರೊ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಮಂಗಳವಾರ ಸಂಜೆ 5.33ರಿಂದ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿರುವ ಕಾರಣ ರೈಲು ಸಂಚಾರದಲ್ಲಿ ಅಡಚಣೆಯಾಗಿದೆ’ ಎಂದು ಹೇಳಿದೆ. 

ADVERTISEMENT

ಹೀಗಾಗಿ ಬನಶಂಕರಿಯಿಂದ ರೇಷ್ಮೆಸಂಸ್ಥೆವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.