ADVERTISEMENT

ದೀಪಾವಳಿ: 55 ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:08 IST
Last Updated 28 ಅಕ್ಟೋಬರ್ 2024, 16:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ದೀಪಾವಳಿ ಮತ್ತು ಛತ್‌ ಪೂಜೆಯ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 55 ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಸಾಮಾನ್ಯ ರೈಲುಗಳ ದಟ್ಟಣೆಯನ್ನು ನಿವಾರಿಸಲು, ವೇಟಿಂಗ್ ಲಿಸ್ಟ್ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಿರಂತರ ಎಟಿವಿಎಂ ಟಿಕೆಟಿಂಗ್‌ನ ಅನುಕೂಲಕ್ಕಾಗಿ ಎಲ್ಲ ಎಟಿವಿಎಂ ಆಯೋಜಕರಿಗೆ ಹೆಚ್ಚುವರಿ ಸ್ಮಾರ್ಟ್ ಕಾರ್ಡ್‌ಗಳನ್ನು ಮುಂಚಿತವಾಗಿ ನೀಡಲಾಗಿದೆ. ಕಾಯುವ ಸಮಯ ಕಡಿಮೆ ಮಾಡಲು ಮೊಬೈಲ್ ಟಿಕೆಟಿಂಗ್, ಸ್ಮಾರ್ಟ್‌ ಕಾರ್ಡ್‌, ಕ್ಯೂಆರ್ ಆಧಾರಿತ ಟಿಕೆಟಿಂಗ್ ಅನ್ನು ಪ್ರೋತ್ಸಾಹಿಸಲಾಗಿದೆ. ಹೆಚ್ಚುವರಿ ಟಿಕೆಟಿಂಗ್ ಕೌಂಟರ್‌ ಒದಗಿಸಲಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ ತಿಳಿಸಿದ್ದಾರೆ.

ADVERTISEMENT

ಪ್ರಯಾಣಿಕರು ಟಿಕೆಟ್ ಪಡೆಯುವುದನ್ನು ಮತ್ತು ಕ್ರಮಬದ್ಧವಾಗಿ ರೈಲು ಹತ್ತುವುದನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಕೌಂಟರ್‌ಗಳಲ್ಲಿ ಮತ್ತು ಸಾಮಾನ್ಯ ಕೋಚ್ ಪ್ರವೇಶದ್ವಾರಗಳಲ್ಲಿ ಕ್ಯೂ ಮ್ಯಾನೇಜರ್ ಗಳನ್ನು ನಿಯೋಜಿಸಲಾಗಿದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಲಭ್ಯತೆ ಮತ್ತು ಜನಸಂದಣಿಯ ಒತ್ತಡದಿಂದಾಗಿ ಆರೋಗ್ಯ ವ್ಯತ್ಯಯ ಉಂಟಾದ ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿ ನೆರವು ನೀಡಲಿದ್ದಾರೆ. ಪ್ರಮುಖ ನಿಲ್ದಾಣಗಳಲ್ಲಿ ಆಂಬುಲೆನ್ಸ್ ಜೊತೆಗೆ ವೈದ್ಯಕೀಯ ಬೂತ್‌ಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಯಾಣಿಕರಿಗೆ ಕುಡಿಯುವ ನೀರು ಪೂರೈಸಲಾಗುವುದು. ಪಾದಚಾರಿ ಮೇಲ್ಸೇತುವೆಗಳು, ಎಸ್ಕಲೇಟರ್‌, ವಿಶ್ರಾಂತಿ ಕೊಠಡಿಗಳು ಮತ್ತು ಪ್ಲಾಟ್ ಫಾರ್ಮ್‌ಗಳಿಗೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಹೆಚ್ಚುವರಿ ಸಂಕೇತ/ಟೈಮ್ ಟೇಬಲ್ ಬೋರ್ಡ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಸುವ್ಯವಸ್ಥೆ ಮತ್ತು ಭದ್ರತೆಗಾಗಿ ರೈಲ್ವೆ ಸುರಕ್ಷತಾ ಬಲ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಸಿಬ್ಬಂದಿ ನಿಯೋಜನೆ ಹೆಚ್ಚಿಸಲಾಗಿದೆ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಮತ್ತು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಸಂಭಾವ್ಯ ತಾಂತ್ರಿಕ ತಡೆಗಳನ್ನು ನಿರ್ವಹಿಸಲು ಹೆಚ್ಚುವರಿ ಬೆಳಕು ಮತ್ತು ಬ್ಯಾಕಪ್ ವಿದ್ಯುತ್ ಸರಬರಾಜಿನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.