ADVERTISEMENT

ಗ್ರಾಹಕರು ಮಾಸ್ಕ್ ಧರಿಸದಿದ್ದರೆ ಮಾಲೀಕರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 21:25 IST
Last Updated 9 ಡಿಸೆಂಬರ್ 2020, 21:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಭಾಂಗಣಗಳು, ಕಿರಾಣಿ ಅಂಗಡಿ, ಶಾಪಿಂಗ್ ಮಾಲ್‌ಗಳು, ನಿಗದಿತ ಬ್ರ್ಯಾಂಡ್ ಮಳಿಗೆಗಳು ಸೇರಿದಂತೆ ವಿವಿಧೆಡೆ ಗ್ರಾಹಕರು ಮುಖಗವಸು ಧರಿಸದಿದ್ದಲ್ಲಿ ಹಾಗೂ ಕೋವಿಡ್ ಮಾರ್ಗಸೂಚಿಯು ಪಾಲನೆಯಾಗದಿದ್ದಲ್ಲಿ ವಾಣಿಜ್ಯ ಪ್ರದೇಶದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.

ಸರ್ಕಾರವು ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ–2020ಕ್ಕೆ ತಿದ್ದುಪಡಿ ತಂದಿದೆ. ಅದರ ಅನುಸಾರ ಹವಾನಿಯಂತ್ರಣ ಇಲ್ಲದ ಸಭಾಂಗಣಗಳು ಹಾಗೂ ಕಿರಾಣಿ ಅಂಗಡಿಗಳಿಗೆ ₹ 5 ಸಾವಿರ ದಂಡ ನಿಗದಿಪಡಿಸಲಾಗಿದೆ. ಹವಾನಿಯಂತ್ರಿತ ಸಭಾಂಗಣಗಳು, ಬ್ರ್ಯಾಂಡ್ ಮಳಿಗೆಗಳು, ಶಾಪಿಂಗ್ ಮಾಲ್‌ಗಳಿಗೆ ₹ 10 ಸಾವಿರ ದಂಡವನ್ನು ಗೊತ್ತುಪಡಿಸಲಾಗಿದೆ. ತ್ರಿ ಸ್ಟಾರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಟಾರ್ ಹೋಟೆಲ್‌ಗಳು, ಮದುವೆ ಸಭಾಂಗಣ ಸೇರಿದಂತೆ 500 ಮಂದಿ ಸೇರುವ ಸ್ಥಳಗಳಿಗೆ ₹ 10 ಸಾವಿರ ದಂಡವನ್ನು ನಿಗದಿಪಡಿಸಲಾಗಿದೆ.

ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ರ್‍ಯಾಲಿಗಳ ಆಯೋಜನೆ ವೇಳೆ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಆಯೋಜಕರಿಗೆ ₹ 10 ಸಾವಿರ ದಂಡ ವಿಧಿಸಲಾಗುತ್ತದೆ. ಈ ನಿಯಮವು ಬುಧವಾರದಿಂದಲೇ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.