ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ರನ್ ವೇ 8ರಲ್ಲಿ ವಿಟಿ ಮೈಕ್ರೊಲೇಟ್ ವಿಮಾನವು (ಖಾಸಗಿ ಸಂಸ್ಥೆ) ಟೇಕಾಫ್ ವೇಳೆ ಎಂಜಿನ್‌ಆಫ್ ಆಗಿ ಅದರ ಗೇರ್ ಸಹ ಮುರಿದಿದ್ದು ಅವಘಡದ ಮಾಹಿತಿಯನ್ನು ಗೋಪ್ಯವಾಗಿಟ್ಟ ಸಂಸ್ಥೆಯ ಮಾಲೀಕರು ಹಾಗೂ ಪೈಲಟ್ ಸೇರಿ ನಾಲ್ವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಕ್ರೊಲೇಟ್ ಮಾಲೀಕ ಬಿ.ಜಿ.ಕುಮಾರಸ್ವಾಮಿ, ಪೈಲಟ್ ಕ್ಯಾಪ್ಟನ್ ಅಮರನಾಥ್ ಬೈರಪ್ಪ, ವಿಮಾನ ನಿಯಂತ್ರಕ ಕ್ಯಾಪ್ಟನ್ ಶರತ್ಚಂದ್ರ, ಸಂಸ್ಥೆಯ ಪ್ರತಿನಿಧಿ ಬಿ.ಕೆ.ಸಿದ್ದಾರ್ಥ ವಿರುದ್ಧ ದೂರು ದಾಖಲಾಗಿದೆ.
‘ವಿಮಾನವು ಮೂರು ಲ್ಯಾಂಡಿಂಗ್ ಆಗಿ ನಾಲ್ಕನೇ ಬಾರಿ ಲ್ಯಾಂಡಿಂಗ್ ವೇಳೆ ಅವಘಡ ನಡೆದಿದೆ. ಅವಘಡವಾದರೂ ಯಾರೊಬ್ಬರೂ ಘಟನೆಯ ವರದಿ ನೀಡಿಲ್ಲ. ವಿಮಾನದ ರೆಕ್ಕೆಗಳನ್ನು ಬಿಚ್ಚಿ ಕೊಂಡೊಯ್ಯಲಾಗಿದೆ. ಇದು ಅಕ್ರಮವಾಗಿದೆ. ಜತೆಗೆ, ವಿಮಾನ ನಿರ್ವಹಣೆಗೆಂದು ಜಕ್ಕೂರು ನಿಲ್ದಾಣದಿಂದ ವಿಮಾನವನ್ನು ಹೊರಕ್ಕೆ ಕೊಂಡೊಯ್ಯಲಾಗಿದೆ’ ಎಂದು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಕಾರ್ಯದರ್ಶಿ ದೂರು ನೀಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.