ಬೆಂಗಳೂರು: ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಬ ಪ್ರದರ್ಶನಕ್ಕೆ ಆ.15, 17 ಮತ್ತು 18ರಂದು ಭೇಟಿ ನೀಡಲಿರುವ ಜನರ ಅನುಕೂಲಕ್ಕಾಗಿ ‘ನಮ್ಮ ಮೆಟ್ರೊ’ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳನ್ನು ನೀಡುತ್ತಿದೆ.
ಈ ದಿನಗಳಲ್ಲಿ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್ಬಾಗ್ ಮೆಟ್ರೊ ನಿಲ್ದಾಣದಿಂದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ₹30 ದರ ನಿಗದಿಪಡಿಸಲಾಗಿದೆ. ಆಯಾ ದಿನದ ಟಿಕೆಟ್, ಆಯಾ ದಿನಕ್ಕೆ ಮಾತ್ರ ಮಾನ್ಯ ಆಗಿರುತ್ತದೆ.
ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಪೇಪರ್ ಟಿಕೆಟ್ ಖರೀದಿಸಬಹುದು. ಈ ಮೂರೂ ದಿನಗಳಲ್ಲಿ ಮೆಟ್ರೊ ಲಾಲ್ಬಾಗ್ ನಿಲ್ದಾಣದಲ್ಲಿ ಟೋಕನ್ಗಳನ್ನು ನೀಡಲಾಗುವುದಿಲ್ಲ.
ಎಂದಿನಂತೆ ಸ್ಮಾರ್ಟ್ ಕಾರ್ಡ್, ಎನ್ಸಿಎಂಸಿ ಕಾರ್ಡ್ಗಳು, ಕ್ಯೂಆರ್ ಟಿಕೆಟ್ಗಳ ಮೂಲಕ ಪ್ರಯಾಣಿಸಬಹುದು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.