ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ತೊಂದರೆಗೊಳಗಾದವರಿಗೆ ಬಿಬಿಎಂಪಿ ನೇತೃತ್ವದಲ್ಲಿ ಉಚಿತವಾಗಿ ಆಹಾರ ಪೂರೈಸುವ ಕಾರ್ಯದಲ್ಲಿ ಹಲವು ಸಂಘ–ಸಂಸ್ಥೆಗಳು ತೊಡಗಿವೆ. ಹೀಗೆ, ಆಹಾರವನ್ನು ತಯಾರಿಸಲಾಗುತ್ತಿರುವ ಘಟಕಗಳಿಗೆ ಮೇಯರ್ ಗೌತಮ್‌ಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೈನ್ ಸಂಸ್ಥೆಯು ನಗರದ ಅರಮನೆ ಮೈದಾನದ ಪ್ರಿನ್ಸಸ್ ಗಾಲ್ಫ್ ಹಾಲ್‌ನಲ್ಲಿ ಆಹಾರ ತಯಾರಿಸುತ್ತಿದ್ದ ಘಟಕಕ್ಕೆ ಭೇಟಿ ನೀಡಿದ ಮೇಯರ್, 40 ಸಾವಿರ ಆಹಾರ ಪೊಟ್ಟಣಗಳನ್ನು ತಯಾರಿಸಲು ಮನವಿ ಮಾಡಿದರು. ಇದಕ್ಕೆ ಸಂಸ್ಥೆಯು ಸಮ್ಮತಿ ನೀಡಿತು. ಸದ್ಯ, ಜೈನ್ ಸಂಸ್ಥೆಯು ನಿತ್ಯ 14 ಸಾವಿರ ಆಹಾರ ಪೊಟ್ಟಣವನ್ನು ಪೂರೈಸುತ್ತಿದೆ.
ಬಿಬಿಎಂಪಿಯು ಇಂದಿರಾ ಕ್ಯಾಂಟೀನ್ ಮೂಲಕ ಪ್ರತಿನಿತ್ಯ ವಿತರಣೆ ಮಾಡುತ್ತಿದೆ. ಇನ್ನಿತರ ಕೆಲ ಸೇವಾ ಸಂಸ್ಥೆಗಳು ಸಹ ಬಿಬಿಎಂಪಿಗೆ ಮಾಹಿತಿ ನೀಡಿ ಆಹಾರ ಒದಗಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.