ಬೆಂಗಳೂರು: ‘ಖಾದ್ಯ ತೈಲಗಳ ಶುದ್ಧೀಕರಣಕ್ಕೆ ‘ಸಿಂಥೆಟಿಕ್ ಮೆಗ್ನೀಸಿಯಂ ಸಿಲಿಕೇಟ್’ ಬಳಸಲು ಅವಕಾಶವಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರೆಸ್ಟೋರೆಂಟ್‌ಗಳಿಗೆ ನೀಡಿರುವ ನೋಟಿಸ್‌ಗಳನ್ನು ಮರು ಪರಿಶೀಲಿಸಬೇಕು’ ಎಂದು ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಆರ್‌ಎಐ) ಮನವಿ ಮಾಡಿದೆ.
‘ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈ ರಾಸಾಯನಿಕ ಬಳಕೆಗೆ ಅವಕಾಶ ನೀಡಿದೆ. ತೈಲದ ಗುಣಮಟ್ಟ ಹೆಚ್ಚಿಸಲು ಬಳಸಲಾಗುವ ಈ ರಾಸಾಯನಿಕವು, ಪ್ರತಿಕೂಲ ಪರಿಣಾಮ ಹೊಂದಿಲ್ಲ. ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿ ಅನುಸಾರವೇ ಖಾದ್ಯ ತೈಲ ತಯಾರಿಕಾ ಕಂಪನಿಗಳು ಈ ರಾಸಾಯನಿಕ ಬಳಸಿವೆ’ ಎಂದು ಆರ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ರಾಜಗೋಪಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ನೋಟಿಸ್ ಗೊಂದಲ ಉಂಟುಮಾಡಿದೆ. ಆದ್ದರಿಂದ ನೋಟಿಸ್ ಮರು ಪರಿಶೀಲಿಸಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.