ಬೆಂಗಳೂರು: ಮಹದೇವಪುರ ವಲಯದ ಮಾರತಹಳ್ಳಿ ಹೊರವರ್ತುಲ ರಸ್ತೆಯಲ್ಲಿ 50 ಕಡೆ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಪಾಲಿಕೆ ಈ ವಾರ ತೆರವು ಮಾಡಿದೆ.
ಮಹದೇವಪುರ ವ್ಯಾಪ್ತಿಯಲ್ಲಿ ಕಳೆದ ವರ್ಷ ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ತೆರವು ಮಾಡಿದ ಕೆಲದಿನಗಳ ಬಳಿಕ ಪುನಃ ಒತ್ತುವರಿ ಮಾಡಲಾಗುತ್ತಿತ್ತು. ಈ ರೀತಿ ಪದೇ ಪದೇ ಒತ್ತುವರಿ ಮಾಡುವವರ ಮೇಲೆ ನಿಗಾ ಇಟ್ಟು ಅವರ ವಿರುದ್ಧ ಪ್ರಕರಣ ದಾಖಲಿಸಲು ಪಾಲಿಕೆ ಚಿಂತನೆ ನಡೆಸಿದೆ.
‘ಪಾದಚಾರಿ ಮಾರ್ಗ ಇರುವುದು ಪಾದಚಾರಿಗಳಿಗಾಗಿ. ಒತ್ತುವರಿ ಮಾಡಿದವರಿಗೆ ಆರಂಭದಲ್ಲಿ ಎಚ್ಚರಿಕೆ ನೀಡಲಾಗುವುದು. ಮತ್ತೆ ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಪಾಲಿಕೆ ಎಂಜಿನಿಯರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.