ADVERTISEMENT

ಓಮೈಕ್ರಾನ್ ಸೋಂಕಿತನಿಗೆ ಕೋವಿಡ್ ನಕಲಿ ವರದಿ‌ ಕೊಟ್ಟಿದ್ದ ನಾಲ್ವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:05 IST
Last Updated 13 ಡಿಸೆಂಬರ್ 2021, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ಹೋಟೆಲ್‌ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರಜೆಗೆ ಕೋವಿಡ್ ಪರೀಕ್ಷೆ ನಕಲಿ‌ ವರದಿ ನೀಡಿ, ಅವರು ಪರಾರಿಯಾಗಲು ಸಹಾಯ‌ ಮಾಡಿದ್ದ ಆರೋಪದಡಿ‌ ನಾಲ್ವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಪ್ರಜೆ ಇತ್ತೀಚೆಗೆ ನಗರಕ್ಕೆ ‌ವಿಮಾನದಲ್ಲಿ‌ ಬಂದಿದ್ದರು. ನಿಲ್ದಾಣದಲ್ಲಿ‌ ಪರೀಕ್ಷೆ ನಡೆಸಿದಾಗ, ಆತನಿಗೆ‌ ಓಮೈಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಮುಂಜಾಗ್ರತಾ ಕ್ರಮವಾಗಿ‌ ಪ್ರಜೆಯನ್ನು ನಗರದ ಹೋಟೆಲೊಂದರ ಕೊಠಡಿಯಲ್ಲಿ‌ ಇರಿಸಲಾಗಿತ್ತು. 14 ದಿನ ಕೊಠಡಿ ‌ಬಿಟ್ಟು ಹೋಗದಂತೆ ಬಿಬಿಎಂಪಿ‌ ಅಧಿಕಾರಿಗಳನ್ನು ತಾಕೀತು ಮಾಡಿದ್ದರು.

ಆದರೆ, ಹೋಟೆಲ್‌ ಸಿಬ್ಬಂದಿಗೆ‌ ನಕಲಿ ವರದಿ ತೋರಿಸಿ ದಕ್ಷಿಣ ಆಫ್ರಿಕಾ‌ ಪ್ರಜೆ ನಗರದಿಂದ‌ ಪರಾರಿಯಾಗಿದ್ದಾರೆ. ಅವರು ಹಾಗೂ ಅವರನ್ನು ಬಿಟ್ಟು ‌ಕಳುಹಿಸಿದ್ದ ಹೋಟೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತನಿಖೆ‌ ಕೈಗೊಂಡಿದ್ದ ಪೊಲೀಸರು, ನಕಲಿ ವರದಿ ನೀಡಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

'ಹಣ ಪಡೆದು ನಕಲಿ ವರದಿ‌ ನೀಡಲಾಗಿತ್ತು. ನಾಲ್ವರನ್ನು‌ ವಿಚಾರಣೆ ಮಾಡುತ್ತಿದ್ದೇವೆ' ಎಂದು ಪೊಲೀಸರು‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.