ಬೆಂಗಳೂರು: ನಗರದಲ್ಲಿ ನೀರಿನ ಅಭಾವ ತಲೆದೂರಿದ ಸಂದರ್ಭದಲ್ಲಿ ಜಲಮಂಡಳಿ ವತಿಯಿಂದ ಪರಿಸ್ಥಿತಿ ನಿಭಾಯಿಸಿದ ರೀತಿ ಹಾಗೂ ತ್ಯಾಜ್ಯ ನೀರಿನ ಸದ್ಬಳಕೆಗೆ ಕೈಗೊಂಡ ಕ್ರಮಗಳ ಬಗ್ಗೆ ರಾಯಭಾರಿ ಕಚೇರಿಯ ನಿಯೋಗ ಶ್ಲಾಘನೆ ವ್ಯಕ್ತಪಡಿಸಿತು.
ಇಂಡೊ -ಫ್ರಾನ್ಸ್ ಸಹಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕಬ್ಬನ್‌ಪಾರ್ಕ್‌ನಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಫ್ರಾನ್ಸ್ ರಾಯಭಾರಿ ಕಚೇರಿಯ ನಿಯೋಗ ಗುರುವಾರ ಭೇಟಿ ನೀಡಿತ್ತು.
ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರು ನಿಯೋಗಕ್ಕೆ ಜಲಮಂಡಳಿಯ ಕಾರ್ಯ ವೈಖರಿ, ಸುಸ್ಥಿರ ಭವಿಷ್ಯಕ್ಕೆ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯ ಪ್ರಾತ್ಯಕ್ಷಿಕೆ ನೀಡಿದರು.
ಭಾರತ ದೇಶದ ಆರ್ಥಿಕ, ಸಾಮಾಜಿಕ, ಪರಿಸರದಲ್ಲಿ ಅಳವಡಿಸಿಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಅಧ್ಯಯನ ಮಾಡಲು ಬಂದಿರುವ ಫ್ರಾನ್ಸ್ ರಾಯಭಾರಿ ಕಚೇರಿಯ ನಿಯೋಗದ ಸದಸ್ಯರು, ಜಲಮಂಡಳಿಯ ಹೊಸ ತಂತ್ರಜ್ಞಾನಗಳು, ತ್ಯಾಜ್ಯ ನೀರನ್ನು ಸಮಪರ್ಕವಾಗಿ ಬಳಕೆ, ವ್ಯವಸ್ಥಿತವಾಗಿ ಸರಬರಾಜು ಮಾಡಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.