ADVERTISEMENT

ಧನಸಹಾಯ: ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಮೊದಲ ಕಂತು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 23:40 IST
Last Updated 12 ಮಾರ್ಚ್ 2024, 23:40 IST
   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2023–24ನೇ ಸಾಲಿಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಮೊದಲ ಕಂತಿನ ಧನಸಹಾಯ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ, ಸಾಮಾನ್ಯ ವರ್ಗದಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗವಾರು ಸಂಘ–ಸಂಸ್ಥೆಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇದೇ ಮೊದಲ ಬಾರಿ ಕಂತುವಾರು ಅನುದಾನ ಮಂಜೂರು ಮಾಡಲಾಗಿದೆ. ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ಶೇ 31ರಷ್ಟು, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ಶೇ 33ರಷ್ಟು, ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ಶೇ 40ರಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. 

ಪರಿಶಿಷ್ಟ ಜಾತಿ ಉಪಯೋಜನೆಯಡಿ ಬೆಂಗಳೂರು ವಿಭಾಗದಡಿ 230 ಸಂಘ–ಸಂಸ್ಥೆಗಳಿಗೆ ಜಿಲ್ಲಾ ಸಮಿತಿ ಶಿಫಾರಸು ಮಾಡಿದ ₹3.13 ಕೋಟಿಯಲ್ಲಿ ₹97.10 ಲಕ್ಷ ಮಂಜೂರು ಮಾಡಲಾಗಿದೆ. ಮೈಸೂರು ವಿಭಾಗದಡಿ 60 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹1.35 ಕೋಟಿಯಲ್ಲಿ ₹41.85 ಲಕ್ಷ, ಕಲಬುರಗಿ ವಿಭಾಗದಡಿ 186 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹3.35 ಕೋಟಿಯಲ್ಲಿ ₹1.03 ಕೋಟಿ, ಬೆಳಗಾವಿ ವಿಭಾಗದಡಿ 43 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹1.03 ಕೋಟಿಯಲ್ಲಿ ₹31.93 ಲಕ್ಷ ಮಂಜೂರು ಮಾಡಲಾಗಿದೆ. 

ADVERTISEMENT

ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬೆಂಗಳೂರು ವಿಭಾಗದಡಿ 42 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹59.50 ಲಕ್ಷದಲ್ಲಿ ₹19.63  ಲಕ್ಷ, ಮೈಸೂರು ವಿಭಾಗದಡಿ 8 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹ 24.50 ಲಕ್ಷದಲ್ಲಿ ₹ 8.08 ಲಕ್ಷ, ಕಲಬುರಗಿ ವಿಭಾಗದಿಂದ 19 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹43.50 ಲಕ್ಷದಲ್ಲಿ ₹14.35 ಲಕ್ಷ, ಬೆಳಗಾವಿ ವಿಭಾಗದಿಂದ 28 ಸಂಘ–ಸಂಸ್ಥೆಗಳಿಗೆ ಶಿಫಾರಸು ಮಾಡಲಾದ ₹77.50 ಲಕ್ಷದಲ್ಲಿ ₹25.57 ಲಕ್ಷ ಮಂಜೂರು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.