ಪೀಣ್ಯ ದಾಸರಹಳ್ಳಿ: ಸತತ ಮಳೆಯಿಂದಾಗಿ ಗಾಣಿಗರಹಳ್ಳಿ ಕೆರೆತುಂಬಿ ಕೋಡಿ ಹರಿಯಿತು. ರಾಜಕಾಲುವೆ
ಯಿಂದ ನೀರು ಹರಿಯದೆ, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಶೆಟ್ಟಿಹಳ್ಳಿಯ ನಿಸರ್ಗ ಲೇಔಟ್, ಚಿಕ್ಕಬಾಣಾವರದ ಮಾರುತಿ ನಗರದ ಮನೆಗಳಿಗೆ ಹಾಗೂ ಚಿಕ್ಕಬಾಣಾವರದ ಮಾರುತಿ ನಗರದ ಆರು ಮನೆಗಳಿಗೆ ನೀರು ನುಗ್ಗಿತ್ತು. ಸುತ್ತಮುತ್ತಲ ರಸ್ತೆಗಳು, ಪ್ರದೇಶ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಸುತ್ತಮುತ್ತಲಿನ ಅಂಗಡಿಗಳಿಗೂ ನೀರು ನುಗ್ಗಿತ್ತು.
ಚಿಕ್ಕಬಾಣಾವರ ಪುರಸಭೆ ಎಂಜಿನಿಯರ್ ಸುಮತಿ ಪ್ರತಿಕ್ರಿಯಿಸಿ, ‘ಗಾಣಿಗರಹಳ್ಳಿ ಕೆರೆ ಕೋಡಿಯಾಗಿ ದಿಢೀರನೆ ಬಂದ ನೀರಿನಿಂದ ರಾಜಕಾಲುವೆಗೆ ಒತ್ತಡ ಹೆಚ್ಚಾಯಿತು. ಈ ನೀರು ಮನೆಗಳಿಗೆ ನುಗ್ಗಿದೆ. ನಿವಾಸಿಗಳು ಸದ್ಯ ಸಂಬಂಧಿಕರ ಮನೆಗಳಿಗೆ ಹೋಗಿದ್ದು, ಅವರಿಗೆ ಊಟ, ತಿಂಡಿ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.