ಬೆಂಗಳೂರು: ನಲ್ಲೂರಹಳ್ಳಿ ಕೆರೆಗೆ ಹೋಟೆಲ್‌ಗಳ ಮತ್ತು ಪೇಯಿಂಗ್ ಗೆಸ್ಟ್‌ಕಟ್ಟಡಗಳ ಕಸ ಎಸೆಯುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಕಸ ಎಸೆಯಲು ಬಂದ ಪಿ.ಜಿ ಕಟ್ಟಡದ ಸಿಬ್ಬಂದಿಯೊಬ್ಬರನ್ನು ಸ್ಥಳೀಯ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪಿ.ಜಿ. ಕಟ್ಟಡದ ಮಾಲೀಕ ಸಹಚರರೊಂದಿಗೆ ಸ್ಥಳಕ್ಕೆ ಬಂದು ಆ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ‘ಇನ್ನು ಮುಂದೆಯೂ ಕಸ ಹಾಕುತ್ತೇವೆ. ನೀವು ಯಾರು ಕೇಳಲಿಕ್ಕೆ’ ಎಂದು ಉಡಾಫೆಯ ಉತ್ತರ ನೀಡಿದ್ದಾನೆ. ಆ ಮಹಿಳೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಈ ಘಟನೆ ಬಗ್ಗೆ ಪೊಲೀಸರಿಗೆ ದೂರುನೀಡಿದ್ದೇವೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಸ ಎಸೆಯದಂತೆ ಪಿ.ಜಿ. ಕಟ್ಟಡದ ಮಾಲೀಕನಿಗೆ ಎಚ್ಚರಿಕೆ ನೀಡಿದರು’ ಎಂದು ಹೆಸ್ಥಳೀಯರೊಬ್ಬರು‘ಪ್ರಜಾವಾಣಿ’ಗೆ ತಿಳಿಸಿದರು.
‘ತರಕಾರಿ ಮತ್ತು ಹೋಟೆಲ್‌ಗಳ ಕಸ ಹಾಗೂಮಾಂಸದ ತ್ಯಾಜ್ಯವನ್ನು ಕೆರೆಗೆ ಎಸೆಯಲಾಗುತ್ತಿದೆ. ಇದರಿಂದ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಜಲಮೂಲಗಳಿಗೆ ಕಸ ಎಸೆಯುವವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು. ಕೆರೆ ರಕ್ಷಣೆ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಗಮನ ಸೆಳೆಯಲು ‘ಮಾನವ
ಸರಪಳಿ ರಚಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.