ADVERTISEMENT

ಗೇಟ್ ದುರಂತ: ಮೃತ ಬಾಲಕನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:48 IST
Last Updated 25 ಸೆಪ್ಟೆಂಬರ್ 2024, 14:48 IST
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮೃತ ಬಾಲಕ ನಿರಂಜನ್‌ನ ತಂದೆ–ತಾಯಿಗೆ ಪರಿಹಾರದ ಚೆಕ್‌ ನೀಡಿದರು. ಸಚಿವ ದಿನೇಶ್‌ ಗುಂಡೂರಾವ್ ಉಪಸ್ಥಿತರಿದ್ದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮೃತ ಬಾಲಕ ನಿರಂಜನ್‌ನ ತಂದೆ–ತಾಯಿಗೆ ಪರಿಹಾರದ ಚೆಕ್‌ ನೀಡಿದರು. ಸಚಿವ ದಿನೇಶ್‌ ಗುಂಡೂರಾವ್ ಉಪಸ್ಥಿತರಿದ್ದರು   

ಬೆಂಗಳೂರು: ಮಲ್ಲೇಶ್ವರದಲ್ಲಿ ಆಟದ ಮೈದಾನದ ಗೇಟ್‌ ಬಿದ್ದು ಮೃತಪಟ್ಟ ನಿರಂಜನ್‌ ನಿವಾಸಕ್ಕೆ ಬುಧವಾರ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ₹10 ಲಕ್ಷ ಮೊತ್ತದ ಪರಿಹಾರದ ಚೆಕ್‌ ಅನ್ನು ಕುಟುಂಬದವರಿಗೆ ನೀಡಿದರು.

‘ಬಾಲಕನ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿ ನಮಗೆ ಮಾದರಿಯಾಗಿದ್ದಾರೆ. ಬಡತನವಿದ್ದರೂ ಸಮಾಜಕ್ಕೆ ಕಾಣಿಕೆ ನೀಡುವ ಅವರ ತೀರ್ಮಾನ ಮೆಚ್ಚುವಂತಹದ್ದು. ಮಗನನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ’ ಎಂದು ಶಿವಕುಮಾರ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಸಚಿವರಾದ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ನಿವಾಸಕ್ಕೆ ತೆರಳಿ ಬಾಲಕನ ತಂದೆ–ತಾಯಿಗೆ ಸಾಂತ್ವನ ಹೇಳಲಾಗಿದೆ. ಬಿಬಿಎಂಪಿ ಹಾಗೂ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಮೃತ ಬಾಲಕನ ತಂಗಿಯ ವಿದ್ಯಾಭ್ಯಾಸಕ್ಕೆ ದಿನೇಶ್‌ ಗುಂಡೂರಾವ್‌ ಅವರ ಫೌಂಡೇಷನ್‌ ವತಿಯಿಂದ ನೆರವು ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಗೇಟ್‌ ಬಿದ್ದಿರುವ ಪ್ರಕರಣ ಹಾಗೂ ಕಾಮಗಾರಿಯ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ನಗರದ ಇತರೆಡೆಗಳಲ್ಲೂ ಗೇಟ್‌ ಪರಿಶೀಲನೆ ಕಾರ್ಯ ಆರಂಭವಾಗಿದೆ’ ಎಂದು ಶಿವಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.