ಬೆಂಗಳೂರು: ಅಮನ ಜೆ.ಕುಮಾರ್ ಅವರ ನಾಲ್ಕನೇ ಕೃತಿ ‘ಗೆಲೋರ್ ಆಫ್ ಮಿಸ್ಟ್ರೀಸ್’ ಅನ್ನು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿದರು.
ಇದೊಂದು ಉತ್ತಮ ಕೃತಿಯಾಗಿದ್ದು, ಓದುಗರಿಂದ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.
ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮನ ಕೆಎಸ್‌ಆರ್‌ಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಟಿ.ಎಸ್, ಕಿರು ಉದ್ಯಮಿ ಜೈವಂತ್ ಕುಮಾರ್ ಅವರ ಪುತ್ರಿ. ಅಮನ 6ನೇ ತರಗತಿಯಲ್ಲಿದ್ದಾಗಲೇ ಇಂಗ್ಲಿಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದರು. ‘ಇಕೋಸ್ ಆಫ್ ಸೋಲ್‌ಫುಲ್ ಪೊಯಮ್ಸ್’ ಮತ್ತು ‘ವಲ್ರ್ಡ್ ಅಮಿಡಿಸ್ಟ್ ದ ವರ್ಡ್’ ಕ್ರಮವಾಗಿ ಮೊದಲ ಮತ್ತು ಎರಡನೇ ಇಂಗ್ಲಿಷ್ ಕವನ ಸಂಕಲನಗಳಾಗಿದ್ದವು. ಅವರ ‘ಲಫ್‌ಝೊನ್ ಕಿ ಮುಹ್ಫಿಲ್’ ಹಿಂದಿ ಕವನ ಸಂಕಲನ ಈಗಾಗಲೇ ಬಿಡುಗಡೆಯಾಗಿವೆ.
‘ಗೆಲೋರ್ ಆಫ್ ಮಿಸ್ಟ್ರೀಸ್’ ಕೃತಿಯು ಕವನ ಹಾಗೂ ಕಿರು ಕಥೆಗಳ ಸಂಗ್ರಹವಾಗಿದ್ದು, ರಹಸ್ಯಗಳ ಕೌತುಕಗಳನ್ನು ಸಾಹಸ, ಭಯಾನಕ ಮತ್ತು ನವಿರು ಹಾಸ್ಯ ಶೈಲಿಯಲ್ಲಿ ಬರೆದಿರುವ ಕೃತಿಯಾಗಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಭಾರತದ ಕಿರಿಯ ಕವಯಿತ್ರಿ ಆಗಿರುವ ಅಮನ ಅವರ ಸಾಧನೆಗಳು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ -2021’, ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ -2021’, ‘ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ - 2021’, ‘ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’, ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ 2022’, ‘ವಂಡರ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್’, ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸೇರಿವೆ.
ಕೃತಿ ಪರಿಚಯ
ಕೃತಿ: ಗೆಲೋರ್ ಆಫ್ ಮಿಸ್ಟ್ರಿಸ್
ಕೃತಿಕಾರ್ತಿ: ಅಮನ ಜೆ. ಕುಮಾರ್
ಪ್ರಕಾಶನ: ರೋಸ್ಟ್ರಮ್
ಪುಟ: 138 ದರ: ₹ 199
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.