ADVERTISEMENT

ಬೆಂಗಳೂರು: ‘ಸ್ಮೋಕಿ ಪಾನ್’ ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ

ಪಿಟಿಐ
Published 22 ಮೇ 2024, 7:33 IST
Last Updated 22 ಮೇ 2024, 7:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಇಲ್ಲಿನ 12 ವರ್ಷದ ಬಾಲಕಿಯೊಬ್ಬಳಿಗೆ ‘ಸ್ಮೋಕಿ ಪಾನ್’ (ಲಿಕ್ವಿಡ್ ನೈಟ್ರೋಜನ್ ಪಾನ್) ಸೇವನೆ ಬಳಿಕ ಹೊಟ್ಟೆಯಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಕಳೆದ ತಿಂಗಳು ವಿವಾಹ ಸಮಾರಂಭವೊಂದರಲ್ಲಿ ದ್ರವ ಸಾರಜನಕ ಹಾಕಲಾಗಿದ್ದ, ಹೊಗೆ ತರಿಸುವ ಈ ಪಾನ್ ಸೇವಿಸಿದ್ದಳು. ಕೆಲ ಸಮಯದ ಬಳಿಕ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ಬಳಿಕ ಹೊಟ್ಟೆಯಲ್ಲಿ ರಂಧ್ರವಾಗಿರುವುದು ದೃಢಪಟ್ಟಿತ್ತು. ಇದರಿಂದಾಗಿ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಬಾಲಕಿ ಚೇತರಿಸಿಕೊಂಡಿದ್ದಾಳೆ

ADVERTISEMENT

‘ಬಾಲಕಿಗೆ ‘ಎಕ್ಸ್‌ಪ್ಲೊರೇಟರಿ ಲ್ಯಾಪ್ರೊಟಮಿ’ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಹೊಟ್ಟೆಯಲ್ಲಿ 4x5 ಸೆಂ.ಮೀ. ಉದ್ದದ ಅನಾರೋಗ್ಯಕರ ವಸ್ತು ಅಂಟಿಕೊಂಡಿರುವುದು ಪತ್ತೆಯಾಯಿತು. ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯಲಾಗಿದ್ದು, ಎರಡು ದಿನ ತೀವ್ರ ನಿಗಾ ಘಟಕದಲ್ಲಿ ಇದ್ದಳು. ಆರು ದಿನಗಳ ಬಳಿಕ ಮನೆಗೆ ತೆರಳಿದ್ದಾಳೆ’ ಎಂದು ಆಸ್ಪತ್ರೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.