ADVERTISEMENT

ಚಲನಚಿತ್ರ ಜನರಲ್ಲಿ ಆತ್ಮೀಯ ಭಾವ ಮೂಡಿಸುವ ಮಾಧ್ಯಮವಾಗಲಿ: ಶ್ರೀಶ್ರೀ ರವಿಶಂಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2024, 12:36 IST
Last Updated 30 ಜುಲೈ 2024, 12:36 IST
<div class="paragraphs"><p>ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರರು ಮಾತನಾಡಿದರು</p></div>

ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರರು ಮಾತನಾಡಿದರು

   

ಬೆಂಗಳೂರು: ಆರ್ಟ್‌ ಆಫ್‌ ಲಿವಿಂಗ್‌ ಆಯೋಜಿಸಿದ್ದ ನಾಲ್ಕು ದಿನಗಳ ವಿಶ್ವ ಸಾಂಸ್ಕೃತಿಕ ಚಲನಚಿತ್ರೋತ್ಸವವು ಲಾಸ್‌ ಏಂಜಲೀಸ್‌ನಲ್ಲಿ ನಡೆಯಿತು.

ಸ್ಫೂರ್ತಿದಾಯಕ, ಶಿಕ್ಷಣಪ್ರದ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಸಂಭ್ರಮಿಸುವಂತಹ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರರು ಈ ಸಂದರ್ಭದಲ್ಲಿ ಮಾತನಾಡಿ, ‘ಜನರ ಮೇಲೆ, ಅವರ ಮನಸ್ಸುಗಳ ಮೇಲೆ ಚಲನಚಿತ್ರಗಳು ಆಳವಾದ ಪ್ರಭಾವವನ್ನು ಬೀರುತ್ತವೆ. ಮಾನವನ ಚೇತನವನ್ನು ಉದ್ದೀಪಿಸುವ ಸಲುವಾಗಿ ಇದನ್ನು ಒಂದು ಮಾಧ್ಯಮವನ್ನಾಗಿ ಬಳಸಬಹುದೆ? ಜನರಲ್ಲಿ ಹೆಚ್ಚು ಸಂತೋಷವನ್ನು ತರಲು, ಆತ್ಮೀಯ ಭಾವವನ್ನು ಉಂಟುಮಾಡಲು ಚಲನಚಿತ್ರಗಳನ್ನು ಒಂದು ಮಾಧ್ಯಮವಾಗಿ ಬಳಸಬಹುದೆ?’ ಎಂದು ಕೇಳಿದರು.

ADVERTISEMENT

ನಾಯಕನನ್ನು ಹಿಂಸಾತ್ಮಕ ಹಾಗೂ ಉದ್ರಿಕ್ತನನ್ನಾಗಿ ಬಿಂಬಿಸಿರುವ ಚಲನಚಿತ್ರಗಳಿಂದ ಉಂಟಾದ ನಕಾರಾತ್ಮಕ ಮಾದರಿಯ  ಬಗ್ಗೆ ಮಾತನಾಡಿದ ಅವರು, ಪ್ರತಿಯೊಂದು ಮಗುವು ತಾನು, ನಾಯಕನಾಗಲು ಬಯಸುತ್ತದೆ. ಆದರೆ ಕಥೆಯಲ್ಲಿರುವ ಪಾತ್ರವು ಮಾದರಿಯಾಗಿದೆಯೇ? ಮಾನವ ಮನಸ್ಸನ್ನು ಉತ್ಥಾಪಿಸುವ ಕೆಲಸ ಮಾಡುತ್ತಿದೆಯೆ? ಇದರ ಬಗ್ಗೆ ಆಲೋಚಿಸಬೇಕಾಗಿದೆ. ಮನರಂಜನಾ ಕ್ಷೇತ್ರದ ಅನೇಕ ನಿರ್ಮಾಪಕರು, ನಟರು, ನಿರ್ದೇಶಕರು ಇಲ್ಲಿರುವಿರಿ. ನಿಮಗೆಲ್ಲರಿಗೂ ಈ ದೃಷ್ಟಿಕೋನ ಕಾಣಿಸುತ್ತಿದೆ ಮತ್ತು ಜಗತ್ತನ್ನು ಪ್ರೇಮ ಮತ್ತು ಕರುಣೆಯಲ್ಲಿ ಒಂದಾಗಿ ತಂದು ವೈಶ್ವಿಕ ಚೇತನದ ಮೇಲೆ ಪ್ರಭಾವವನ್ನು ಬೀರಲು ನೀವೇನು ಮಾಡಬಲ್ಲಿರಿ ಎಂದು ಪ್ರಶ್ನಿಸಿದರು’ ಎಂದರು.

ಡಬ್ಲ್ಯುಸಿಎಫ್‌ಎಫ್ ಆಸ್ಕರ್‌ಗೆ ನಾಮನಿರ್ದೇಶಗೊಂಡ ಡ್ರಾಮೇಡಿಯಾದ, ಪಾವೋ ಚೋಯ್ನಿಂಗ್ ದೋರ್ಜಿಂಗ್‌ ನಿರ್ದೇಶಿಸಿದ ‘ಮಾಂಕ್ ಆಂಡ್ ದಿ ಗನ್’, ಭೂತಾನ್‌ನ ಚಲನಚಿತ್ರ 'ಲೂನಾನಾ: ಏ ಯಾಕ್ ಇನ್ ದಿ ಕ್ಲಾಸ್ ರೂಮ್’ ಚಿತ್ರ ಪ್ರದರ್ಶನ ನಡೆಯಿತು. ಈ ಚಿತ್ರ 2022ರಲ್ಲಿ ಉತ್ತಮ ಅಂತರರಾಷ್ಟ್ರೀಯ ಚಿತ್ರ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಮಾಂಕ್ ಆಂಡ್ ದಿ ಗನ್ ನ ಪ್ರದರ್ಶನದ ನಂತರ, ಪ್ರೇಕ್ಷಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.