ADVERTISEMENT

ಬೆಂಗಳೂರು | ನಗರದಲ್ಲಿ ಕೆಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:32 IST
Last Updated 10 ಜುಲೈ 2024, 16:32 IST
ನಗರದ ಕೆ.ಆರ್. ರಸ್ತೆಯಲ್ಲಿ ಮಳೆ ಬಂದಾಗ ಕೊಡೆ ಹಿಡಿದು ಸಾಗಿದ ವಾಹನ ಸವಾರರು
ಪ್ರಜಾವಾಣಿ ಚಿತ್ರ
ನಗರದ ಕೆ.ಆರ್. ರಸ್ತೆಯಲ್ಲಿ ಮಳೆ ಬಂದಾಗ ಕೊಡೆ ಹಿಡಿದು ಸಾಗಿದ ವಾಹನ ಸವಾರರು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ.

ವಿದ್ಯಾಪೀಠ, ಬನಶಂಕರಿಯಲ್ಲಿ ತಲಾ 2.7 ಸೆಂ.ಮೀ, ರಾಜರಾಜೇಶ್ವರಿ ನಗರ, ಹೆಮ್ಮಿಗೆಪುರ, ಎಚ್‌. ಗೊಲ್ಲಹಳ್ಳಿಯಲ್ಲಿ ತಲಾ 2.5 ಸೆಂ.ಮೀ, ಕೆಂಗೇರಿ, ಉತ್ತರಹಳ್ಳಿಯಲ್ಲಿ ತಲಾ 1.75 ಸೆಂ.ಮೀ ಮಳೆಯಾಗಿದೆ.

ನಾಯಂಡಹಳ್ಳಿ, ಬಿಟಿಎಂ ಲೇಔಟ್‌, ಗೊಟ್ಟಿಗೆರೆ, ಬೊಮ್ಮನಹಳ್ಳಿ, ಬಿಳೇಕಹಳ್ಳಿ, ಅಂಜನಾಪುರ, ಎಚ್‌ಎಎಲ್‌ ವಿಮಾನ ನಿಲ್ದಾಣ, ಹಗದೂರು, ವನ್ನಾರ್‌ ಪೇಟೆ, ವಿಶ್ವೇಶ್ವರಪುರ, ಪಟ್ಟಾಭಿರಾಮನಗರ ಕೋರಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ADVERTISEMENT

ವಿಠ್ಠಲ ಮಲ್ಯ ರಸ್ತೆಯ ಬಳಿ ಮರ ಬಿದ್ದ ಕಾರಣ, ಸೋಮವಾರ ಮಧ್ಯಾಹ್ನ ಹಡ್ಸನ್‌ ವೃತ್ತದ ಸುತ್ತಮುತ್ತ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.