ADVERTISEMENT

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಎರಡು ಅಂಕಿ ದಾಟದ ದಾಖಲಾತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 19:44 IST
Last Updated 25 ಆಗಸ್ಟ್ 2018, 19:44 IST
ಹುಚ್ಚನಪಾಳ್ಯದ ಕಿರಿಯ ಪ್ರಾಥಮಿಕ ಶಾಲೆ
ಹುಚ್ಚನಪಾಳ್ಯದ ಕಿರಿಯ ಪ್ರಾಥಮಿಕ ಶಾಲೆ   

ಬೆಂಗಳೂರು: ದಾಸನಪುರ ಹೋಬಳಿ ಹುಚ್ಚನಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆದ ಐದು ವರ್ಷಗಳಿಂದ ನಾಲ್ಕು ಜನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

1998ರಲ್ಲಿ ಆರಂಭವಾದ ಶಾಲೆಗೆ ಮೊದಲ ಹತ್ತು ವರ್ಷ 30ರಿಂದ 40 ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. 2010ರಲ್ಲಿ ಗ್ರಾಮದಿಂದ ಮೂರು ಕಿಲೋಮೀಟರ್‌ ದೂರದಲ್ಲಿ ಖಾಸಗಿ ಶಾಲೆಯು ಪ್ರಾರಂಭವಾಯಿತು. ಬಳಿಕ ಈ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ಐದಾರು ವರ್ಷಗಳಿಂದ ಈಚೆಗೆ ಈ ಸಂಖ್ಯೆ ಐದರಿಂದ ಮೂರಕ್ಕೆ ಇಳಿದಿದೆ ಎಂದು ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೇವಲ ಮೂರು ಜನ ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು, ಒಬ್ಬರು ಅಡುಗೆ ಸಿಬ್ಬಂದಿಯನ್ನು ಸರ್ಕಾರ ನೇಮಿಸಿದೆ. ವಿದ್ಯಾರ್ಥಿಗಳಿಗೆ ಆಟವಿಲ್ಲ. ಬರೀ ಪಾಠ. ಮೂರು ಜನ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಎರಡನೇಯ ತರಗತಿಗೆ ಪಾಠ ಮಾಡುವಾಗ ನಾಲ್ಕನೇ ತರಗತಿ ವಿದ್ಯಾರ್ಥಿ ಸುಮ್ಮನೆ ಕೂರಬೇಕು. ಈ ವ್ಯವಸ್ಥೆಯಿಂದ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಪೂರೈಸಲು ಅಗುತ್ತಿಲ್ಲ ಎನ್ನುವುದು ಪೋಷಕರ ಅಳಲು.

ADVERTISEMENT

‘ಹುಚ್ಚನಪಾಳ್ಯ ಗ್ರಾಮದಿಂದ ಒಂದು ಕಿಲೋಮೀಟರ್‌ ದೂರದಲ್ಲಿ ಪಿಳ್ಳಹಳ್ಳಿ ಗ್ರಾಮವಿದೆ. ಅಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಈ ಶಾಲೆಯ ಮಕ್ಕಳನ್ನು ಸೇರಿಸಿದರೆ ಮಕ್ಕಳ ಶಿಕ್ಷಣದ ಗುಣಮಟ್ಟವು ಸುಧಾರಿಸುತ್ತದೆ. ಇಲ್ಲಿಯ ಶಿಕ್ಷಕಿಯನ್ನು ಕೊರತೆ ಇರುವ ಶಿಕ್ಷಕರ ಸ್ಥಳಕ್ಕೆ ವರ್ಗಾಯಿಸಬಹುದು. ಮೂರು ಜನ ಮಕ್ಕಳಿಗೆ ಸೀಮಿತವಾದ ಅವರ ವಿದ್ಯಾಭ್ಯಾಸದ ಮಟ್ಟ ಮೂವತ್ತು ಜನಕ್ಕೆ ಸಿಕ್ಕರೆ ಹೆಚ್ಚಿನ ಪ್ರಯೋಜನವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.