ADVERTISEMENT

ಯಲಹಂಕ | ಸಾತನೂರು ಗ್ರಾ.ಪಂ ಅಧ್ಯಕ್ಷರಾಗಿ ಶಿವಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 16:26 IST
Last Updated 25 ಜುಲೈ 2024, 16:26 IST
ಶಿವಣ್ಣ ಅವರ ಭಾವಚಿತ್ರ
ಶಿವಣ್ಣ ಅವರ ಭಾವಚಿತ್ರ   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೊಸಹಳ್ಳಿ ಶಿವಣ್ಣ ಹಾಗೂ ಉಪಾಧ್ಯಕ್ಷರಾಗಿ ಜಾಹೆರ ತಸ್ನೀಮ್‌ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 11 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಿವಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಾಹೆರ ತಸ್ನೀಮ್‌ ಮತ್ತು ಮಾಲಾ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಮಾಲಾ ನಾಮಪತ್ರ ವಾಪಸ್‌ ಪಡೆದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಕೆ.ಜಿಲಾನಿ, ಎಂ.ಕೃಷ್ಣಪ್ಪ, ಎಸ್‌.ಎಲ್‌.ಸುಜಾತ, ಅಶ್ವಿನಿ, ಮಾನಸ, ಮಾಲಾ ಸುಬ್ರಮಣಿ, ಎನ್‌.ನಾರಾಯಣಸ್ವಾಮಿ, ಸ್ಥಳೀಯ ಮುಖಂಡರಾದ ಆರ್‌.ಸುರೇಶ್‌, ಆನಂದಗೌಡ, ಎ.ಕೃಷ್ಣ, ನವೀನ್‌ಕುಮಾರ್‌ ಉಪಸ್ಥಿತರಿದ್ದರು.

ADVERTISEMENT
 ಜಾಹೆರ ತಸ್ನೀಮ್‌ ಅವರ ಭಾವಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.