ADVERTISEMENT

ಕಡಲೆಕಾಯಿ ಪರಿಷೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 19:24 IST
Last Updated 3 ನವೆಂಬರ್ 2018, 19:24 IST
ಪರಿಷೆಯಲ್ಲಿ ಕಡಲೆಕಾಯಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು
ಪರಿಷೆಯಲ್ಲಿ ಕಡಲೆಕಾಯಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು   

ಬೆಂಗಳೂರು: ಯಲಹಂಕ ಸಮೀಪದ ವೆಂಕಟಾಲ ಗ್ರಾಮದಲ್ಲಿ ಅಭಯ ಮಹಾಗಣಪತಿ ದೇವಾಲಯದ 6ನೇ ವಾರ್ಷಿಕೋತ್ಸವದ ಅಂಗವಾಗಿ ಕಡಲೆಕಾಯಿ ಪರಿಷೆ ಶನಿವಾರ ಆರಂಭವಾಯಿತು.

ಪರಿಷೆಯಲ್ಲಿ ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ಹೊಸಕೋಟೆ, ಗೌರಿಬಿದನೂರು, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕಡಲೇಕಾಯಿ ವ್ಯಾಪಾರಿಗಳು ಭಾಗವಹಿಸಿ, ನಾಟಿ, ಸಮ್ರಾಟ್, ಜೆಎಲ್ ಮತ್ತಿತರ ಜಾತಿಯ ಕಡಲೇಕಾಯಿಯನ್ನು ಪ್ರತಿ ಕೆಜಿಗೆ ₹50-60 ದರದಂತೆ ಮಾರಾಟ ಮಾಡಿದರು.

ಜನರು ಉತ್ಸಾಹದಿಂದ ಪರಿಷೆಯಲ್ಲಿ ಪಾಲ್ಗೊಂಡರು. ತಮಗಿಷ್ಟವಾದ ಹಸಿ ಮತ್ತು ಹುರಿದ ಕಡಲೆಕಾಯಿಯನ್ನು ಖರೀದಿಸಿದರು. ಇದರ ಜೊತೆಗೆ ಮಕ್ಕಳ ಆಟಿಕೆಗಳು, ತಿಂಡಿ-ತಿನಿಸುಗಳು, ಕಬ್ಬಿನ ಜಲ್ಲೆ, ಹಣ್ಣುಗಳು, ಮಣ್ಣಿನ ಮತ್ತು ಪಿಒಪಿ ಬೊಂಬೆಗಳು, ಗೃಹೋಪಯೋಗಿ ಮತ್ತು ಹೆಣ್ಣುಮಕ್ಕಳ ಅಲಂಕಾರಿಕ ಆಭರಣಗಳ ಮಾರಾಟದ ಭರಾಟೆಯೂ ಜೋರಾಗಿ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.