ಬೆಂಗಳೂರು: ಕೈಗಾರಿಕೆಗಳ ಕಲ್ಮಶನೀರು ನದಿ ಒಡಲು ಸೇರದಂತೆ ತಡೆಯುವುದೇ ಸರ್ಕಾರಗಳಿಗೆ ದೊಡ್ಡ ಸವಾಲು. ಅಂತಹ ನೀರನ್ನು ಶುದ್ಧೀಕರಿಸಿದ ನಂತರ ಮರುಬಳಕೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ಅಧ್ಯಕ್ಷ ಸುನಿಲ್ ಕುಮಾರ್ ಹೇಳಿದರು.
ಭಾರತ ಜಲಶಕ್ತಿ ಸಚಿವಾಲಯ, ಕೇಂದ್ರೀಯ ಅಂತರ್ಜಲ ಮಂಡಳಿ, ರಾಜ್ಯ ಜಲಸಂಪನ್ಮೂಲ ಇಲಾಖೆ ಸೋಮವಾರ ‘ರಾಷ್ಟ್ರೀಯ ಜಲಧರಗಳ ನಕಾಶೆ ರೂಪಿಸುವುದು ಮತ್ತು ನಿರ್ವಹಣೆ’ ಕುರಿತು ಹಮ್ಮಿಕೊಂಡಿದ್ದ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನದಿ ಸೇರುವ ಕಲ್ಮಶ ನೀರು ನದಿ ಪಾತ್ರದ ಜನ, ಜಾನುವಾರುಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿ ಣಾಮ ಬೀರುತ್ತದೆ ಮತ್ತು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತದೆ. ನೀರು ನದಿ ಸೇರುವುದನ್ನು ತಡೆದು, ಸಂಸ್ಕರಣೆ ಮಾಡಿದರೆ ಮರುಬಳಕೆ ಸಾಧ್ಯವಾಗುತ್ತದೆ’ ಎಂದರು.
ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ‘ಎರಡನೇ ಮಹಾ ಯುದ್ಧದ ನಂತರ ನೀರಿನ ಮಹತ್ವ ವಿಶ್ವಕ್ಕೆ ಅರಿವಾಯಿತು. ಎಲ್ಲೆಡೆ ನೀರಿಗೆ ಹಾಹಾಕಾರ ಕಾಣಿಸಿಕೊಂಡಿತ್ತು. ನೀರನ್ನು ಹಂಚಿ ಕೊಂಡು ಕುಡಿಯುವ ಪರಿಪಾಟ ಆರಂಭವಾಯಿತು. ನೀರು ಬಳಕೆಯ ಕುರಿತು ಪರಸ್ಪರ ಸಹಕಾರ ತತ್ವವನ್ನು ಇಂದು ಹಲವು ದೇಶಗಳು ಅಳವಡಿಸಿ ಕೊಂಡಿವೆ. ಎಲ್ಲರೂ ನೀರಿನ ಮಹತ್ವ ಅರಿತು, ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಜನರಿಗೆ ಅಗತ್ಯವಿರುವ ನೀರು ಲಭ್ಯವಾಗ ಲಿದೆ’ ಎಂದು ಹೇಳಿದರು.
ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್, ‘ಭಾರತದ 14 ರಾಜ್ಯಗಳಲ್ಲಿ 100 ಜಿಲ್ಲೆಗಳು ಬರಗಾಲದ ಸ್ಥಿತಿಗೆ ತಲುಪಿವೆ. ಶೇ 90ರಷ್ಟು ಗ್ರಾಮೀಣ ಪ್ರದೇಶ ಗಳು, ಶೇ 55ರಷ್ಟು ನೀರಾವರಿ ಭೂಮಿ ಅಂತರ್ಜಲ ಮೂಲಗಳನ್ನೇ ಅವಲಂಬಿ ಸಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.