ADVERTISEMENT

ಗ್ಯಾರಂಟಿಯಿಂದ ಕುಟುಂಬಕ್ಕೆ ಆರೇಳು ಸಾವಿರ ಆದಾಯ ಹಂಚಿಕೆ: ಕೃಷ್ಣರಾಜ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 15:27 IST
Last Updated 25 ಫೆಬ್ರುವರಿ 2024, 15:27 IST
ಗೋಷ್ಠಿಯಲ್ಲಿ ಸಂತೋಷ್ ಮೆಹ್ರೋತ್ರಾ ಮತ್ತು ಕೃಷ್ಣರಾಜ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಸಂತೋಷ್ ಮೆಹ್ರೋತ್ರಾ ಮತ್ತು ಕೃಷ್ಣರಾಜ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕರ್ನಾಟಕ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುವುದರ ಮೂಲಕ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ ₹6 ಸಾವಿರದಿಂದ ₹7 ಸಾವಿರ ಆದಾಯ ಹಂಚಿಕೆ ಮಾಡುತ್ತಿದೆ’ ಎಂದು ಪ್ರಾಧ್ಯಾಪಕ ಕೃಷ್ಣರಾಜ್‌ ಹೇಳಿದರು. 

ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ ಭಾನುವಾರ ನಡೆದ ‘ಆದಾಯದ ಅಸಮಾನತೆ ಮತ್ತು ಸಾರ್ವತ್ರಿಕ ಮೂಲ ಆದಾಯ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಪಂಚ ಗ್ಯಾರಂಟಿಗಳಿಂದ ಪ್ರತಿಯೊಬ್ಬರೂ ಕನಿಷ್ಠ ಆದಾಯ ಪಡೆಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಕಾರ್ಪೊರೇಟ್‌ ಮತ್ತು ಕೈಗಾರಿಕಾ ವಲಯಗಳನ್ನು ಬೆಂಬಲಿಸುತ್ತಿದೆ. ಕೇಂದ್ರ ಸರ್ಕಾರದ ನೀತಿಗಳು ಕೈಗಾರಿಕೆ ಹಾಗೂ ಕಾರ್ಪೊರೇಟ್‌ ಕ್ಷೇತ್ರಗಳಿಗೆ ಪೂರಕವಾಗಿವೆ’ ಎಂದರು.

ADVERTISEMENT

ಶಿಕ್ಷಣ ತಜ್ಞ, ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್‌ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರಾ, ಕಾನೂನು ತಜ್ಞ ಬಾಬು ಮ್ಯಾಥ್ಯೂ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.