ಹೊಸದುರ್ಗ: ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮೂರು ದಿನಗಳ ಹಿಂದೆ ಸ್ವಗ್ರಾಮದಲ್ಲಿರುವ ಮನೆಯ ಗೋಡೆ ಕುಸಿದು ಬಿದ್ದಿರುವುದಕ್ಕೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಇಲ್ಲಿ ಕಣ್ಣೀರಿಟ್ಟರು.
ಶ್ರೀರಾಂಪುರ ಗ್ರಾಮದ ನಾಡಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆ ಹಾಗೂ ಪೌತಿ ಖಾತೆ ಆಂದೋಲನ ಕಾರ್ಯಕ್ರಮದ ನಂತರ ಸುದ್ದಿಗಾರೊಂದಿಗೆ ಅವರು ಭಾವುಕರಾಗಿ ಮಾತನಾಡಿದರು.
‘35 ವರ್ಷಗಳ ಹಿಂದೆ ತಂದೆಗೆ ಜನತಾ ಮನೆ ಮಂಜೂರಾಗಿತ್ತು. ನಾನೂ ಅದೇ ಮನೆಯಲ್ಲಿ ಆಟವಾಡಿ ಬೆಳೆದೆ. ನಮ್ಮ ತಂದೆ ತೀರಿ ಹೋದರು. ತಾಯಿ ಮಾತ್ರ ಅಲ್ಲಿ ವಾಸವಿದ್ದರು. ಮಳೆಗೆ ಮನೆಯ ಗೋಡೆ ಕುಸಿದು ಹೋಯಿತು. ಆ ಸಂದರ್ಭದಲ್ಲಿ ನಾನು ಸಂತ್ರಸ್ತ ಗ್ರಾಮಗಳಲ್ಲಿದ್ದೆ. ನಾನು ಸಚಿವನಾಗಿದ್ದರೂ ನನಗಾಗಿ ಮನೆ ಕಟ್ಟಿಸಿಕೊಳ್ಳಲಿಲ್ಲ. ಈಗ ಊರಿನಲ್ಲಿದ್ದ ಮನೆಯೂ ಬಿದ್ದು ಹೋಗಿದೆ. ತಂದೆ ಕಟ್ಟಿಸಿದ ಮನೆ ಎಂಬ ಕಾರಣಕ್ಕೆ ನಮ್ಮ ತಾಯಿಗೆ ಆ ಮನೆ ಮೇಲೆ ಅಪಾರ ಪ್ರೀತಿ ಇದೆ. ಈಗ ಅಲ್ಲಿ ಚಿಕ್ಕದೊಂದು ಮನೆ ಕಟ್ಟಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.