ADVERTISEMENT

ಬೆಂಗಳೂರು: ಭಕ್ತಿಭಾವದಿಂದ ಗುರುಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 23:30 IST
Last Updated 3 ಜುಲೈ 2023, 23:30 IST
ಗುರುಪೂರ್ಣಿಮೆ ಪ್ರಯುಕ್ತ ಜೆ.ಪಿ. ನಗರದ ಶಿರಡಿ ಸಾಯಿಬಾಬಾ ವಿಗ್ರಹಕ್ಕೆ ಸಾವಿರ ತೆಂಗಿನಕಾಯಿ, ಪರಂಗಿ, ಹಲಸಿನ ಹಣ್ಣು, ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳಿಂದ ವಿಶೇಷ ಅಲಂಕಾರ ಮಾಡಲಾಯಿತು
ಗುರುಪೂರ್ಣಿಮೆ ಪ್ರಯುಕ್ತ ಜೆ.ಪಿ. ನಗರದ ಶಿರಡಿ ಸಾಯಿಬಾಬಾ ವಿಗ್ರಹಕ್ಕೆ ಸಾವಿರ ತೆಂಗಿನಕಾಯಿ, ಪರಂಗಿ, ಹಲಸಿನ ಹಣ್ಣು, ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳಿಂದ ವಿಶೇಷ ಅಲಂಕಾರ ಮಾಡಲಾಯಿತು   

ಬೆಂಗಳೂರು: ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ಭಕ್ತಿ ಭಾವದಿಂದ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.

ಜೆ.ಪಿ. ನಗರದ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಶಿರಡಿ ಸಾಯಿಬಾಬಾ ವಿಗ್ರಹಕ್ಕೆ 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5,000 ಬೆಲ್ಲ, 25,000ಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷ ಅಲಂಕಾರ ಮಾಡಲಾಯಿತು. 

ಸಾಯಿ ಬಾಬಾ ಅವರಿಗೆ ಅಲಂಕಾರ ಮಾಡಿದ ಎಲ್ಲಾ ವಸ್ತುಗಳನ್ನು ಮರಳಿ ಭಕ್ತರಿಗೆ ತಲುಪಿಸಲಾಯಿತು. ಪರಂಗಿ, ಹಲಸು ಮತ್ತಿತರ ಆಹಾರ ವಸ್ತುಗಳನ್ನು ಸ್ಥಳದಲ್ಲಿಯೇ ಭಕ್ತರಿಗೆ ಸಮರ್ಪಿಸಲಾಯಿತು. ಕ್ರೀಡಾ ಪರಿಕರಗಳನ್ನು ಶಾಲೆಗಳಿಗೆ ವಿತರಿಸಲಾಯಿತು ಎಂದು ಟ್ರಸ್ಟಿ ರಾಮಮೋಹನ್‌ ರಾಜ್‌ ತಿಳಿಸಿದರು.

ADVERTISEMENT

ಕಾಕಡ ಆರತಿ: ಲಗ್ಗೆರೆ ಹೊರ ವರ್ತುಲ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬು ಮಂದಿರದಲ್ಲಿ ಶಿರಡಿ ಸಾಯಿಬಾಬಾರಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ ಬಳಿಕ ಕಾಕಡ ಆರತಿ ನಡೆಯಿತು. ಜಿ.ವೈ. ಪದ್ಮನಾಗರಾಜ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ರುದ್ರಾರಾಧ್ಯ, ಶಶಿಕಲಾ ಪಕ್ಕ ವಾದ್ಯಗಳಲ್ಲಿ ಸಹಕರಿಸಿದರು.

ಅಮೃತನಗರ: ಅಮೃತನಗರ ಮಾರಿಯಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಯಿಬಾಬಾರಿಗೆ ಪಂಚಾಮೃತ ಅಭಿಷೇಕ, ಮಂಗಳಾರತಿ ಮಾಡಲಾಯಿತು. ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹುಣ್ಣಿಮೆ ಹಾಡು: ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ಮಲ್ಲೇಶ್ವರದ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ಹಮ್ಮಿಕೊಳ್ಳಲಾಯಿತು. 
ಕನ್‌–ಫ್ಯೂಷನ್‌ ತಂಡದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.