ಬೆಂಗಳೂರು: ವರ್ಷದ ಆರಂಭದಲ್ಲೇ ರಾಜ್ಯದಲ್ಲಿ 40 ಎಚ್1ಎನ್1 ಪ್ರಕರಣವರದಿಯಾಗಿದ್ದು, ಅದರಲ್ಲಿ 24 ಪ್ರಕರಣನಗರದಲ್ಲಿಯೇ ಪತ್ತೆಯಾಗಿವೆ.
ಕಳೆದ ವರ್ಷ ಸೋಂಕಿನಿಂದ2 ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದು, ಐದು ವರ್ಷಗಳಲ್ಲಿಯೇ ಅತೀ ಹೆಚ್ಚು ಸಾವು ವರದಿಯಾಗಿತ್ತು. ಚಿಕಿತ್ಸೆ ಫಲಿಸದೆ 96 ಮಂದಿ ಮೃತಪಟ್ಟಿದ್ದರು. 2010ರಲ್ಲಿ 120 ಮಂದಿ ಈ ಜ್ವರದಿಂದಾಗಿ ಮೃತಪಟ್ಟಿದ್ದರು. ಕಳೆದ ವರ್ಷ ಪ್ರಾರಂಭದಲ್ಲಿ ಅಧಿಕ ಮಂದಿಯನ್ನು ಈ ರೋಗ ಕಾಡಿತ್ತಾದರೂವರ್ಷಾಂತ್ಯದ ವೇಳೆಗೆ ನಿಯಂತ್ರಣಕ್ಕೆ ಬಂದಿತ್ತು. ಈಗ ಪುನಃ ಸೋಂಕು ಹರಡಲು ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಯಲ್ಲಿಯೇ 22 ಪ್ರಕರಣಗಳು ಬೆಳಕಿಗೆ ಬಂದಿವೆ. ಉಡುಪಿ–7, ದಕ್ಷಿಣ ಕನ್ನಡ ಮತ್ತು ದಾವಣಗೆರೆಯಲ್ಲಿ ತಲಾ 3, ಬೆಂಗಳೂರು ಗ್ರಾಮಾಂತರ– 2 ಹಾಗೂ ಶಿವಮೊಗ್ಗದಲ್ಲಿ 1 ಪ್ರಕರಣಗಳು ವರದಿಯಾಗಿವೆ. ಜ್ವರ, ಶೀತ, ಗಂಟಲನೋವು, ತಲೆನೋವು, ಮೈ–ಕೈ ನೋವು,ವಾಂತಿ ಮತ್ತು ಭೇದಿಯು ಎಚ್1ಎನ್1 ಜ್ವರದ ಪ್ರಮುಖ ಲಕ್ಷಣಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.