ಬೆಂಗಳೂರು:ವಿದ್ಯಾರ್ಥಿಗಳೇ ಕಟ್ಟಿ ಕೊಂಡಿರುವ ಸರ್ಕಾರೇತರ ಸಂಸ್ಥೆ ‘ಯುವ ಇಗ್ನೈಟೆಡ್ ಮೈಂಡ್ಸ್’ ನೇತೃತ್ವ ದಲ್ಲಿ ಹಲಸೂರು ಕೆರೆ ಸ್ವಚ್ಛತಾ ಅಭಿ ಯಾನ ಶನಿವಾರ ನಡೆಯಿತು.
ಜೈನ್ ವಿಶ್ವವಿದ್ಯಾಲಯದ ನಿರ್ವಹಣಾ ಅಧ್ಯಯನ ಕೇಂದ್ರದ (ಸಿಎಂಎಸ್) 400ಕ್ಕೂ ಹೆಚ್ಚು ಪ್ರತಿನಿಧಿ ಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳ ಮೂರು ತಂಡ ಗಳು ಕೆರೆ ಸ್ವಚ್ಛಗೊಳಿಸುವುದು, ಸಸಿ ನೆಡುವುದು ಹಾಗೂ ಕಸ ವಿಲೇವಾರಿ ಹಂಚಿಕೊಂಡು ಶ್ರಮಾದಾನ ಮಾಡಿ ದರು. ಒಟ್ಟು 52 ಸಸಿಗಳನ್ನು ಕೆರೆ ಅಂಗಳದಲ್ಲಿ ನೆಡಲಾಯಿತು.
ಕರ್ನಾಟಕ ಗೃಹರಕ್ಷಕ ದಳದ ನಾಗರಿಕ ರಕ್ಷಣಾ ಘಟಕವು ದೋಣಿ ಮತ್ತು ಮೇಲ್ವಿಚಾರಕರನ್ನು ಒದಗಿಸಿತ್ತು. ತಲಾ ನಾಲ್ವರು ವಿದ್ಯಾರ್ಥಿಗಳು ಸರದಿ ಯಂತೆ ದೋಣಿ ಮೂಲಕ ಕೆರೆಯೊಳಗೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಮೇಯರ್ ಎಂ. ಗೌತಮ್ ಕುಮಾರ್, ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್, ‘ಫ್ರೆಂಡ್ಸ್ ಆಫ್ ಲೇಕ್ಸ್’ ಸಂಸ್ಥೆ ಸಹಸ್ಥಾಪಕ ವಿ.ರಾಮಪ್ರಸಾದ್, ಸಿಎಂಎಸ್ ಸಂಚಾಲಕಿ ಚೈತ್ರಾ ಶೆಟ್ಟಿಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.