ADVERTISEMENT

ಮುಡಾ ತನಿಖೆ ಸಿಬಿಐಗೆ ನೀಡಿ: ಎನ್‌.ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 19:27 IST
Last Updated 18 ಅಕ್ಟೋಬರ್ 2024, 19:27 IST
ಎನ್.ರವಿಕುಮಾರ್
ಎನ್.ರವಿಕುಮಾರ್   

ಬೆಂಗಳೂರು: ‘ಮುಡಾ ಹಗರಣ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಬೇಕು’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಒತ್ತಾಯಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಿವೇಶನ ಹಂಚಿಕೆ ಹಗರಣದ ಮೂಲ ದಾಖಲಾತಿ ಪರಿಶೀಲಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಶೋಧಕಾರ್ಯ ಆರಂಭಿಸಿದೆ. ಇನ್ನೊಂದೆಡೆ ಲೋಕಾಯುಕ್ತವೂ ತನಿಖೆ ನಡೆಸಿದೆ. ತನಿಖೆ ನಡೆಸಲು ಎರಡೆರಡು ನ್ಯಾಯಾಲಯಗಳು ಆದೇಶಿಸಿವೆ. ಸಿದ್ದರಾಮಯ್ಯ ತಪ್ಪು ಮಾಡಿ ಸಿಲುಕಿಕೊಂಡಿದ್ದು ಎಲ್ಲರಿಗೂ ಗೊತ್ತಾಗಿದೆ’ ಎಂದರು.

‘ಇಂಥದ್ದೇ ಪ್ರಕರಣದಲ್ಲಿ ಬಿಜೆಪಿ ನಾಯಕರು ಸಿಲುಕಿಕೊಂಡಿದ್ದರೆ, ಸಿದ್ದರಾಮಯ್ಯ ಅವರು ಯಾವ ರೀತಿ ಮಾತಿನ ದಾಳಿ ಮಾಡುತ್ತಿದ್ದರು ಎಂದು ಕಲ್ಪಿಸಲು ಅಸಾಧ್ಯ. ಅವರು ತಮಗೆ ಚಾಮುಂಡೇಶ್ವರಿಯ ಆಶೀರ್ವಾದ ಇದೆ ಎನ್ನುತ್ತಾರೆ. ಆದರೆ ತಪ್ಪು ಮಾಡಿರುವ ಅವರಿಗೆ ಲೋಕಾಯುಕ್ತ, ನ್ಯಾಯಾಲಯ, ಇ.ಡಿ ಮತ್ತು ಸಿಬಿಐನ ಆಶೀರ್ವಾದ ಇರುತ್ತದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.