ADVERTISEMENT

ಆಧುನಿಕ ಉಡುಪುಗಳಲ್ಲಿ ಪ್ರಾದೇಶಿಕ ಸೊಗಡಿರಲಿ: ಶಾಲಿನಿ ರಜನೀಶ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 15:51 IST
Last Updated 5 ಜುಲೈ 2024, 15:51 IST
ಯಲಹಂಕ ಸಿಇಎಸ್‌ ಫ್ಯಾಶನ್‌ ತಾಂತ್ರಿಕ ವಿದ್ಯಾಲಯದಲ್ಲಿ ಉಡುಪುಗಳ ವಿನ್ಯಾಸದ ವಾರ್ಷಿಕ ಸ್ಪರ್ಧೆ ನಡೆಯಿತು
ಯಲಹಂಕ ಸಿಇಎಸ್‌ ಫ್ಯಾಶನ್‌ ತಾಂತ್ರಿಕ ವಿದ್ಯಾಲಯದಲ್ಲಿ ಉಡುಪುಗಳ ವಿನ್ಯಾಸದ ವಾರ್ಷಿಕ ಸ್ಪರ್ಧೆ ನಡೆಯಿತು   

ಬೆಂಗಳೂರು: ಫ್ಯಾಶನ್ ಜಗತ್ತಿನಲ್ಲಿದ್ದೇವೆ. ವಿವಿಧ ರೀತಿಯ ಉಡುಪುಗಳ ವಿನ್ಯಾಸಗಳು ಕಾಲಕಾಲಕ್ಕೆ ಬದಲಾಗುತ್ತಿವೆ. ಯಾವುದೇ ಆಧುನಿಕ ಉಡುಪು ವಿನ್ಯಾಸದಲ್ಲಿ ಪ್ರಾದೇಶಿಕ ಸೊಗಡು ಇದ್ದರೆ ಸೊಗಸು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ತಿಳಿಸಿದರು.

ಯಲಹಂಕ ಸಿಇಎಸ್‌ ಫ್ಯಾಶನ್‌ ತಾಂತ್ರಿಕ ವಿದ್ಯಾಲಯದ ಉಡುಪುಗಳ ವಿನ್ಯಾಸದ ವಾರ್ಷಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಉಡುಪುಗಳು ನಮ್ಮ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸಬೇಕು. ಅಂಥ ಉಡುಪುಗಳಿಗೆ ಬೇಡಿಕೆ ಹೆಚ್ಚು’ ಎಂದು ಹೇಳಿದರು.

ADVERTISEMENT

ಪತ್ರಕರ್ತೆ ಶೀಲಾ ಶೆಟ್ಟಿ ಅವರು ಉಡುಪು ವಿನ್ಯಾಸಕಾರರನ್ನು ಅಭಿನಂದಿಸಿದರು. ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಎರಡನೇ ರ‍್ಯಾಂಕ್‌ ಪಡೆದ ಸಿಇಎಸ್‌ ತಾಂತ್ರಿಕ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಗೌಡ ಅವರನ್ನು ಸನ್ಮಾನಿಸಲಾಯಿತು.

ಆಕರ್ಷಕ ಫ್ಯಾಶನ್‌ ಶೋ ನಡೆಯಿತು. 14 ಯುವ ವಿನ್ಯಾಸಕಾರರು ನೂರಕ್ಕೂ ಹೆಚ್ಚು ವಿವಿಧ ವಿಷಯಗಳಡಿ ತಯಾರಿಸಿದ ಉಡುಪುಗಳ ವಿನ್ಯಾಸಗಳನ್ನು ಪ್ರದರ್ಶಿಸಿದರು.

ಉತ್ತಮ ವಿನ್ಯಾಸಕ್ಕಾಗಿ ಸುಹಾನ ಆಫ್ರಿನ್ ಅವರಿಗೆ ಪ್ರಥಮ ಪ್ರಶಸ್ತಿ ನೀಡಲಾಯಿತು. ರುಕ್ಸಾನಾ ರೆಹಮಾನ್  ನೇತೃತ್ವದಲ್ಲಿ ವಿವಿಧ ಸಮೂಹ ನೃತ್ಯಗಳ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.